ಸಹಕಾರಿ ಕ್ಷೇತ್ರದ ಸಿಬ್ಬಂದಿಯನ್ನೂ ಬಿಡಲಿಲ್ಲ ನಕಲಿ ಚಿನ್ನದ ವ್ಯಾಮೋಹ-The fake gold craze

 Suddilive || Holehonnuru

ಸಹಕಾರಿ ಕ್ಷೇತ್ರದ ಸಿಬ್ಬಂದಿಯನ್ನೂ ಬಿಡಲಿಲ್ಲ ನಕಲಿ ಚಿನ್ನದ ವ್ಯಾಮೋಹ-The fake gold craze has not spared even the employees of the cooperative sector.

Fake, Gold

ನಕಲಿ ಚಿನ್ನದ ನಾಣ್ಯದ ವಿಚಾರದಲ್ಲಿ ಮುಗ್ಧರು ಮಾತ್ರವಲ್ಲ,  ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನೂ ವಂಚಿಸುವ ಜಾಲವೊಂದು ಹುಟ್ಟಿಕೊಂಡಿದೆ. ಹಾಸನ ಜಿಲ್ಲೆಯ ಅಮೂಲ್ ಡೈರಿಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಗೆ ನಕಲಿ ಚಿನ್ನದ ನಾಣ್ಯವಿದೆ ಎಂದು ನಂಬಿಸಿ 7 ಲಕ್ಷ ರೂ. ವಂಚಿಸಿರುವ ಘಟನೆ ವರದಿಯಾಗಿದೆ. 

ನಕಲಿ ಚಿನ್ನದ ನಾಣ್ಯದ ವಿಚಾರದಲ್ಲಿ ಹಾಸನದ ಅಮೂಲ್ ಡೈರಿಯಲ್ಲಿ ಕೆಲಸ ಮಾಡಿಕಂಡಿದ್ದ ಗಿರಿಗೌಡ ಎಂಬುವರನ್ನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಂಗೋಟೆ ಗ್ರಾಮದ ಸೇತುವೆ ಬಳಿ ಕರೆಯಿಸಿ ವಂಚಿಸಿದ ಘಟನೆ ದೂರಾಗಿ ದಾಖಲಾಗಿದೆ. 

ಸುರೇಶ್ ಎಂದು ಕರೆ ಮಾಡಿದ ವ್ಯಕ್ತಿ ಮಾದೇಶ್ವರ ಬೆಟ್ಟದ ನಿವಾಸಿ ಎಂದು ಗಿರಿಗೌಡರಿಗೆ ಪರಿಚಯಿಸಿಕೊಂಡು ತನ್ನ ಊರಿನ ಹಿರಿಯ ವ್ಯಕ್ತಿಗೆ ಜಮೀನಿನಲ್ಲಿ ಕೆಲಸ ಮಾಡುವಾಗ ಚಿನ್ನದ ನಾಣ್ಯಗಳು ದೊರೆತಿದೆ. ಅವರ ಮಗಳ ಮದುವೆಗೆ ಹಣಬೇಕಿದೆ. ಬಡವರಿದ್ದಾರೆ. ಕಡಿಮೆ ದರಕ್ಕೆ ಕೊಡುತ್ತಾರೆ ಖರೀದಿಸಿ ಎಂದು ತಿಳಿಸಿದ್ದಾನೆ. 

ಇದಕ್ಕೆ ಉತ್ತರಿಸಿದ ಗಿರಿಗೌಡರು ಜಮೀನಿನಲ್ಲಿ ದೊರೆತ ಚಿನ್ನದ ನಾಣ್ಯವನ್ನ ಸರ್ಕಾರಕ್ಕೆ ಹಿಂದಿರುಗಿಸಿ ಎಂದು ಸಲಹೆ ನೀಡಿ ಕರೆ ಕಟ್ ಮಾಡಿದ್ದಾರೆ. ಇಷ್ಟಕ್ಕೆ ಬಿಡದ ಸುರೇಶ್ ಮತ್ತೆ ಗಿರಿಗೌಡರಿಗೆ ಕರೆ ಮಾಡಿ  ನೀವು ಒಮ್ಮೆ ನಾಣ್ಯಗಳನ್ನ ಪರಿಶೀಲಿಸಿ ನಂತರ ಖರೀದಿಸಿ ಎಂದಾಗ ಗಿರಿಗೌಡರಿಗೆ ನಂಬಿಕೆ ಹೆಚ್ಚಲಾರಂಭಿಸಿದೆ. ಸರಿ ಎಂದು ನಾಣ್ಯವನ್ನ ಪರಿಶೀಲಿಸಲು ಹೊರಟ ಗೌಡರಿಗೆ ಮಂಗೋಟೆ ಬಳಿ ಬರಲು ವಿಳಾಸ ತಿಳಿಸಿತ್ತಾನೆ.

ಮಂಗೋಟೆಯಿಂದ ಒಂದು ಕಿಮಿ ದೂರದ ಸೇತುವೆ ಬಳಿ ನಿಂತು ಅಸಲಿ ಒಂದು ಚಿನ್ನದ ನಾಣ್ಯ ನೀಡಿ ಎಲ್ಲಿಬೇಕಾದರೂ ಪರೀಕ್ಷಿಸಿಕೊಳ್ಳಿ ಇದು ಅಸಲಿ ಚಿನ್ನವೆಂದು ಗೊತ್ತಾದ ಮೇಲೆ ಮುಂದೆ ಮಾತನಾಡೋಣ ಎಂದು ನಾಣ್ಯವನ್ನ‌ಕೊಟ್ಟು ಕಳುಹಿಸಿದ್ದಾನೆ. 

ಪುನಃ ಸುರೇಶ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಮತ್ತೆ ಗಿರಿಗೌಡರಿಗೆ ಕರೆ ಮಾಡಿ ಪರೀಕ್ಷಿಸಿದ್ರಾ? ಅಗಸಾಲಿ ಏನಂದ ಎಂದು ಕೇಳಿದ್ದಾನೆ. ಒಕೆ ಚಿನ್ನದ ನಾಣ್ಯ ಸರಿಯಿದೆ. ಒಂದು ಕೆಜಿ ನಾಣ್ಯದ ದರವನ್ನ ಮಾತನಾಡಿಕೊಂಡು 7 ಲಕ್ಷಕ್ಕೆ ಈ ವ್ಯವಹಾರವನ್ನ ಮುಗಿಸಲಾಗುತ್ತೆ. ಮತ್ತೆ ಮಂಗೋಟೆಯ ಸೇತುವೆ ಬಳಿ ಬಂದು ನಾಣ್ಯಗಳನ್ನ ಸಂಗ್ರಹಿಸಲು ಸುರೇಶ್ ತಿಳಿಸಿದ್ದಾನೆ. 

ಮಂಗೋಟೆಯ ಸೇತುವೆ ಬಳಿ ಬಂದು ನಕಲಿ ಚಿನ್ನದ ನಾಣ್ಯಕ್ಕೆ 7 ಲಕ್ಷ‌ಕೊಟ್ಟು ಖರೀದಿಸಿಕೊಂಡು ಬಂದ ಗಿರಿಗೌಡರಿಗೆ ಇದು ನಕಲಿ ಎಂದು ತಿಳಿಯುತ್ತೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವಂಚನೆಯ ಪ್ರಕರಣವನ್ನ ದಾಖಲಿಸಿದ್ದಾರೆ.

The fake gold craze

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close