ಕಳೆಕಟ್ಟಿದ ಹೊಳೆ ಜಾತ್ರೆ-The Sangameshwara fair in Kudli

Suddilive || Shivamogga

ಕಳೆಕಟ್ಟಿದ ಹೊಳೆ ಜಾತ್ರೆ-The Sangameshwara fair in Kudli was held on a grand scale.

Sangameshwara, fair


ಕೂಡ್ಲಿಯ ತುಂಗಾಭದ್ರ ಸಂಗಮದ ಸಂಗಮೇಶ್ವರ ಜಾತ್ರ ಮಹೋತ್ಸವ ಭಾನುವಾರದಿಂದ ಅದ್ದೂರಿಯಾಗಿ ಆರಂಭವಾಗಿದೆ. ಹೊಳೆ ಜಾತ್ರೆಯಲ್ಲಿ ಜನಜಾತ್ರೆ ಸೇರಿದೆ. 

ಯುಗಾದಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಹೊಳೆ ಜಾತ್ರೆ ಮಹೋತ್ಸವ ಕಳೆಗಟ್ಟಿದೆ. ಯುಗಾದಿ ಹಬ್ಬದ ಮಾರನೇ ದಿನದಿಂದ ಕೂಡ್ಲಿ ಗ್ರಾಮದ ತುಂಗಾ ಹಾಗೂ ಭದ್ರಾ ನದಿಯ ಸಂಗಮದಲ್ಲಿ ಜಾತ್ರೆ ಸಂಗಮೇಶ್ವರ ಜಾತ್ರಾಮಹೊತ್ಸವ ಆರಂಭವಾಗುವ ಜಾತ್ರೆ ೩-೪ ದಿನಗಳ ಕಾಲ ಅದ್ದೂರಿಯಾಗಿ ಜರುಗುತ್ತದೆ. ತುಂಗಭದ್ರ ಪುಣ್ಯ ಸ್ನಾನ ಮಾಡಿ ಸಂಗಮೇಶ್ವರ ದರ್ಶನ ಮಾಡಿ ಹರೆಕೆ ಕಾಣಿಕೆಗಳನ್ನು ಸಲ್ಲಿಸಿದರು.

ಪಟ್ಟಣ ಸುತ್ತಮುತ್ತಲ ಗ್ರಾಮಗಳ ಗ್ರಾಮದೇವರ ಉತ್ಸವ ಮೂರ್ತಿಗಳಿಗೆ ವಿವಿಧ ಪುಷ್ಪ ಮಾಡಿ ತಮಟೆ, ದೋಲು, ಡೊಳ್ಳು, ಜುಂಜು ಮೇಳ ಇಂತಹ ನಾನಾ ವಾದ್ಯಗಳೊಂದಿಗೆ ಹೊಳೆ ಜಾತ್ರೆಗೆ ಕೊಂಡೊಯ್ಯಲಾಗುತ್ತದೆ. ಶ್ರೀ ಸಂಗಮೇಶ್ವರ ದೇವರ ಸನ್ನಿಧಿಯಲ್ಲಿ ಗ್ರಾಮದ ಉತ್ಸವ ಮೂರ್ತಿಗಳಿಗೆ ಪುಣ್ಯ ತೀರ್ಥ ಅಭಿಷೇಕ ಸೇರಿದಂತೆ ಮಹಾ ಮಂಗಳಾರತಿ ಮಾಡಿಸಿ ವಿಜೃಂಭಣೆಯ ಮೆರವಣಿಗೆಯ ಮೂಲಕ ಸ್ವಗ್ರಾಮಗಳತ್ತ ಮರಳುವುದು. ಬಿಸೀಲ ದಗೆ ಹೆಚ್ಚಾಗಿರುವುದರಿಂದ ಬಹುತೇಕರು ನೀರು ಬಿಟ್ಟು ಮೇಲೆಳಲಿಲ್ಲ.ಹೋರ ರಾಜ್ಯಗಳಿಂದ ಪುಣ್ಯಸ್ನಾನಕ್ಕೆ ಬಂದ ಭಕ್ತಾಧಿಗಳಿಂದ ವಾಹನ ಸಂಚಾರಕ್ಕೆ ಅಡೆಚಣೆಯುಂಟಾಯಿತ್ತು. ಭಕ್ತಾದಿಗಳು ಸುಡುವ ಬಿಸೀಲನ್ನು ಲೆಕ್ಕಿಸದೆ ಜಾತ್ರೆಯಲ್ಲಿ ಜಮಾಯಿಸಿದ್ದರು. ಸಂಜೆ ಆಗುತ್ತಿದ್ದಂತೆ ಮತ್ತಷ್ಟು ಜನರು ಜಾತ್ರೆಗೆ ಆಗಮಿಸಿ ಭಾಗವಹಿಸಿ ಖುಷಿ ಪಟ್ಟರು. ಸಂಗಮ ಸ್ಥಳದಿಂದ ಹೊಳೆ ಯಾಚೆ ಜಾತ್ರೆ ನಡೆಯುವ ಸ್ಥಳಕ್ಕೆ ಸಣ್ಣ ದೊಣಿ ಹಾಗೂ ಉಕ್ಕುಡದಲ್ಲಿ ತೆರಳಿದರು.

The Sangameshwara fair in Kudli

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close