ಜಮೀನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಹಿನ್ನಡೆ, ಕುಂಚೇನಹಳ್ಳಿಯ 9 ಜನರ ವಿರುದ್ಧ ದೂರು ದಾಖಲು-Setback in efforts to retain land

 Suddilive || shivamogga

ಜಮೀನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಹಿನ್ನಡೆ, ಕುಂಚೇನಹಳ್ಳಿಯ 9 ಜನರ ವಿರುದ್ಧ ದೂರು ದಾಖಲು-Setback in efforts to retain land, complaint filed against 9 people from Kunchenahalli
Setback, retain


ಮೊನ್ನೆ ಕುಂಚೇನಹಳ್ಳಿ ಸರ್ವೆ ನಂಬರ್ 80 ರಲ್ಲಿದ್ದ  ಸುಮಾರು 23 ಎಕರೆ ಜಾಗ ಒತ್ತುವರಿ ಮಾಡಲು ಹೋದ ಅರಣ್ಯ ಇಲಾಖೆಯವರಿಗೆ ಅಡ್ಡಿಪಡಿಸಿದ 9 ಜನರು ಮತ್ತು ಇತರೆ ಇಬ್ಬರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲಾಖೆ ವತಿಯಿಂದ ಬಂದಿದ್ದ ಹಿಟಾಚಿಗೆ ಹಾನಿ ಮಾಡಿರುವ ಆರೋಪ, ಜೆಸಿಬಿ ಚಾಲಕನ ಮೇಲೆ ಕಲ್ಲುತೂರಾಟ, ವಿಷದ ಬಾಟೆಲ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ, ಜೀವಬೆದರಿಕೆ ಕುರಿತಂತೆ ನಾಗೇಂದ್ರಪ್ಪ, ಗಾಯಿತ್ರಿ, ಚೈತ್ರ, ಮಂಜಪ್ಪ, ರಾಜು, ಸತೀಶ್ ನಾಯ್ಕ್, ಗುರು ನಾಯ್ಕ್, ವೆಂಕಟೇಶ್, ರಾಣಿ ಹಾಗೂ ಇತರೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ. 

ಬೆಂಗಳೂರಿನ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಕುಂಚೇನಹಳ್ಳಿ ಸರ್ ನಂ.80 ರಲ್ಲಿ ಬರುವ ಮೀಸಲು ಅರಣ್ಯದಲ್ಲಿರುವ ನಾಗೇಂದ್ರಪ್ಪ ಮತ್ತು ಮಂಜಪ್ಪನವರು 11 ಎಕರೆ 36 ಗುಂಟೆ, ಶಿವನಾಯ್ಕ್ ಅವರ 5 ಎಕರೆ 32 ಗುಂಟೆ, ಅರುಣಾಬಾಯಿ ಅವರು 5 ಎಕರೆ 5 ಗುಂಟೆ ಜಾಗವನ್ನ ಒತ್ತುವರಿ ಮಾಡಿದ್ದು ಒತ್ತುವರೆ ತೆರವು ಮಾಡಿ ಜಾಗವನ್ನ ಇಲಾಖೆ ವಶಕ್ಕೆ ಪಡೆಯಲು ನ್ಯಾಯಾಲಯ ಆದೇಶಿಸಿತ್ತು. 

ಆದೇಶದಂತೆ ಒತ್ತುವರಿ ಜಾಗವನ್ನ ತೆರವುಗೊಳಿಸಿ ಕಂದಕ ನಿರ್ಮಿಸಲು ಹಿಟಾಚಿಯನ್ನ ಕರೆಯಿಸಿದಾಗ, ಹಿಟಾಚಿಯ ಮಿರರ್ ನ್ನ ಕಲ್ಲಿನಿಂದ ಒಡೆದುಹಾಕಿ,  ಜೆಸಿಬಿ ಚಾಲಕನ ಮೇಲೆ ಕಲ್ಲುತೂರಲಾಗಿದೆ ಎಂದು ಆರ್ ಎಫ್ ಒ ನೀಡಿದ ದೂರಿನ ಮೇರೆಗೆ ತಿಳಿದುಬಂದಿದೆ. 

ವಿಷದ ಬಾಟೆಲ್ ಹಿಡಿಕೊಂಡು ಬಂದ ಮಹಿಳೆಯರು ಒತ್ತುವರಿ ತೆರವುಗೊಳಿಸಿದರೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆಸರಿಸಿದ್ದಾರೆ. ಅದರಂತೆ ಆರ್ ಎಫ್ ಒ ರವರಿಗೆ, ನೀವು ಮತ್ತು ನಿಮ್ಮ ಸಿಬ್ಬಂದಿಗಳು ಗ್ರಾಮಕ್ಕೆ ಒಬ್ಬೊಬ್ಬರೆ ಬಂದಲ್ಲಿ ಮಚ್ಚಿನಿಂದ ಕಡಿದುಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ  ದೂರು ನೀಡಿದ್ದಾರೆ. ಇದರಿಂದ ಜಮೀನು ಉಳಿಸಿಕೊಲ್ಳುವ ರೈತರ ಪ್ರಯತ್ನಕ್ಕೆ ಬಾರಿ ಹಿನ್ನಡೆಯಾಗಿದೆ. 

Setback in efforts to retain land

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close