Suddilive || Shivamogga
ಸಾಗರ-ಆನಂದಪುರ ರೈಲ್ವೆಕ್ರಾಸಿಂಗ್ ಎರಡು ದಿನಗಳ ವರೆಗೆ ಬಂದ್-ಪರ್ಯಾಯ ಮಾರ್ಗ ಸೂಚನೆ -Sagar-Anandpur railway crossing closed for two days, alternate route advised
ಸಾಗರ ದಿಂದ ಆನಂದಪುರ ಸ್ಟೇಷನ್ ನಡುವೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ ನಂ: 129 ಕಿ.ಮಿ :142/400-500 ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಎರಡು ದಿನಗಳ ವರೆಗೆ ಗೇಟ್ ಗಳನ್ನಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಮಾ.26 ಮತ್ತು 27 ರಂದು ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಇಂಜಿನಿಯರ್ ಅವರು ಮನವಿ ಮಾಡಿಕೊಂಡಿದ್ದರು.
ಸಾಗರದಿಂದ ಆನಂದಪುರಕ್ಕೆ ಚಲಿಸುವವರು ರೈಲ್ವೆ ಕ್ರಾಸಿಂಗ್ 130 ರ ಮೂಲಕ ಚಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಎಲ್ ಸಿ 130 ಸಾಗರ ಟೌನ್ ನಿಂದ ಕೆಳದಿ ರಸ್ತೆ ಮೂಲಕ ಚಲಿಸಲು ಡಿಸಿ ಸೂಚಿಸಿದ್ದಾರೆ.
Sagar-Anandpur railway crossing closed