ದಿಟ್ಟ ಹೆಚ್ಚೆ ಇಟ್ಟ ಎಸ್ಪಿ ಮಿಥುನ್ ಕುಮಾರ್, ಈ ಬಗ್ಗೆಯೂ ಗಮನಹರಿಸಲಿ!SP Mithun Kumar should pay attention to this too

 Suddilive || Shivamogga

ದಿಟ್ಟ ಹೆಚ್ಚೆ ಇಟ್ಟ ಎಸ್ಪಿ ಮಿಥುನ್ ಕುಮಾರ್, ಈ ಬಗ್ಗೆಯೂ ಗಮನಹರಿಸಲಿ!SP Mithun Kumar, who has been very bold, should pay attention to this too!

Sp, attension

ಶಿವಮೊಗ್ಗದ ಪೊಲೀಸ್ ಠಾಣೆಯ ಗನ್ ಮ್ಯಾನ್ ಮತ್ತು ಚಾಲಕರ ಬದಲಾವಣೆ ಆಗುವ ಸಾಧ್ಯತೆಯಿದೆ. ಇಂದು ಎಸ್ಪಿ ಕಚೇರಿಯಲ್ಲಿ 4 ಗಂಟೆಗೆ ಕೌನ್ಸಲಿಂಗ್ ಕರೆಯಲಾಗಿದೆ. ಈ ವಿಷಯ ನಿಜವೇ ಆದರೆ ಇದೊಂದು  ಒಳ್ಳೆಯ ಬೆಳವಣಿಗೆ

ಕಳೆದ ಐದು ವರ್ಷದಿಂದ ಆಯಾ ಠಾಣಾ ವ್ಯಾಪ್ತಿಯಲ್ಲಿ ಚಾಲಕರು ಮತ್ತು ಗನ್ ಮ್ಯಾನ್ ಗಳು ಕರ್ತವ್ಯ ನಿರ್ವಹಿಸುತ್ತಿದ್ದು ಅವರನ್ನ ಕೌನ್ಸಲಿಂಗ್ ಮೂಲಕ ಡ್ಯೂಟಿ ಹಂಚುವ ಪ್ರಕ್ರಿಯೆಗೆ ಎಸ್ಪಿ ಮಿಥುನ್ ಕುಮಾರ್ ಕೈಹಾಕಿದ್ದಾರೆ. ಈ ವಿಷಯದ ಬಗ್ಗೆ ಎರಡು ಮಾತಿಲ್ಲ. ಎಸ್ಪಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಮೊನ್ನೆ ಡಿಎಆರ್ ನ  ಡಿವೈಎಸ್ಪಿ ಸಿಬ್ಬಂದಿಯೊಬ್ಬರನ್ನ ಕೆಲಸಕ್ಕೆ ನಿಯೋಜಿಸುವ ವಿಷಯದಲ್ಲಿ ಐದು ಸಾವಿರ ರೂ. ಲಂಚ ಪಡೆದು ಲೋಕಾ ಬಲೆಗೆ ಬಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್ಪಿ ಮಿಥುನ್ ಕುಮಾರ್ ಅಮೂಲಾಗ್ರ ಬದಲಾವಣೆಗೆ ಕೈಹಾಕಿದಂತಿದೆ. 

ಇಂದು ಚಾಲಕರನ್ನ ಮತ್ತು ಗನ್ ನ್ಯಾನ್ ಗಳನ್ನ ಕರೆದು ಕೌನ್ಸಲಿಂಗ್ ಮೂಲಕ ಬದಲಾಯಿಸುತ್ತಿರುವುದು ಒಳ್ಳೆಯ ಬೆಳವಣಿಗೆಯೂ ಹೌದು. ಆದರೆ ಈಗಾಗಲೇ ಠಾಣೆಯಲ್ಲಿ ಗನ್ ಮ್ಯಾನ್ ಮತ್ತು ಚಾಲಕರನ್ನ ಹೊರತು ಪಡಿಸಿ ಇತರೆ ಸಿಬ್ವಂದಿಗಳು ಸಹ ಅನೇಕ ವರ್ಷಗಳಿಂದ ಕರ್ತವ್ಯದಲ್ಲಿದ್ದು ಅವರನ್ನೂ ಸಹ ಎಸ್ಪಿ ಅವರು ಬದಲಾಯಿಸಲಿ ಎಂಬ ಕೂಗು ಕೇಳಿ ಬರುತ್ತಿದೆ. 

ಈ ಬಗ್ಗೆ ಸ್ಪೆಸಿಫಿಕ್ ಆಗಿ ಹೇಳಲಾಗದಿದ್ದರೂ ಎಸ್ಪಿ ಅವರೆ ವಿಷಯವನ್ನ ಸಮಗ್ರವಾಗಿ ತಿಳಿದುಕೊಂಡು ಅವರನ್ನೂ ಬದಲಾಯಿಸಲಿ ಎಂಬ ಕೂಗು ಕೇಳಿಬರುತ್ತಿದೆ. ಕೆಲ ಸಿಬ್ಬಂದಿಗಳು ಪಿಐಗಳ ಪರ್ಸನಲ್ ಅಸಿಸ್ಟೆಂಟಾಗಿ ಕೆಲಸ ಮಾಡುತ್ತಿರುವ ಬಗ್ಗೆ ಆಕ್ಷೇಪಗಳು ಕೇಳಿ ಬಂದಿದೆ. ಇದು ಒಂದು ದಿನ ಲೋಕಾಯುಕ್ತರಿಗೆ ಹೋಗಿ ನಂತರ ಮಾಧ್ಯಮಗಳಲ್ಲಿ ಬ್ಲಾಸ್ಟ್ ಆಗುವ ಮೊದಲು ಎಸ್ಪಿ ಮಿಥುನ್ ಕುಮಾರ್ ಗಮನ ಹರಿಸಲಿದ್ದಾರೆ ಎಂಬ ನಿರೀಕ್ಷೆ ಸಹ ಹೆಚ್ಚಾಗಿದೆ.

SP Mithun Kumar, should pay attention to this too!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close