Suddilive || Thirthahalli
ಮಾಸ್ತಿಕಟ್ಟೆಯ ಬಳಿ ರಸ್ತೆ ಅಪಘಾತ-ಸಹಾಯಕ್ಜೆ ಧಾವಿಸಿದ ಕೊಡಚಾದ್ರಿ ಯುವಕರ ಪಡೆ -Road accident near Mastikatte - A group of Kodachadri youth rushed to help
ತೀರ್ಥಹಳ್ಳಿಯ ಮಾಸ್ತಿಕಟ್ಟೆಯ ಬಳಿ ಎನ್ ಇ ಕೆ ಆರ್ ಟಿಸಿ (NEKRTC) ಬಸ್ ಮತ್ತು ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ್ದು, ಬಸ್ ನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಂಗಳೂರಿನಿಂದ ಉಡುಪಿ, ಕುಂದಾಪುರ, ಮಾಸ್ತಿಕಟ್ಟೆ, ಶಿವಮೊಗ್ಗ, ಹರಿಹರದ ಮೂಲಕ ಹೊಸಪೇಟೆಗೆ ಹೋಗುವ ಬಸ್ ಮಾಸ್ತಿಕಟ್ಟೆಯ ಬಳಿ ಎದುರಿನಿಂದ ಬಂದ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಯಾರಿಗೂ ಪ್ರಾಣ ಹಾನಿಯಾಗಿಲ್ಲವಾದರೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಸ್ ನ ಮುಂಭಾಗ ಹಾನಿಗೊಳಗಾಗಿದೆ. ಟ್ಯಾಂಕರ್ ತಿರುಗಿ ನಿಂತಿದೆ. ಈ ವೇಳೆ ಪ್ರಯಾಣಿಕರ ನೆರವಿಗೆ ಧಾವಿಸಿದ ಎಂಎಡಿಬಿ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಮತ್ತು ಕೊಡಚಾದ್ರಿ ಯುವಕರ ಪಡೆಯ ನಾಗರಾಜ್ ಆರೋಗ್ಯ ತಪಾಸಣೆ, ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತ ನಡೆದ ಸಂದರ್ಭದಲ್ಲಿ ಮಾಸ್ತಿಕಟ್ಟೆಯ ಡಾ ಪ್ರದೀಪ್ ಡಿಮ್ಯಾಲೋ ಡಾ ಪ್ರವೀಣ್ ಡಿಮ್ಯಾಲೋ ಸಹಕರಿಸಿದ್ದರು. ನಂತರ ಬಸ್ ನ ಬದಲಿ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಸಿ ಆಸ್ಪತ್ರೆ ತೀರ್ಥಹಳ್ಳಿ ರಕ್ಷಾ ಸಮಿತಿ ಸದಸ್ಯರಾದ ಕುರುವಳ್ಳಿ ನಾಗರಾಜ್ ವಾಸುದೇವ ಕಾಮತ್ ಕಾರ್ತಿಕ್ ಗೌಡ ಅನುಷ್ ಶೆಟ್ಟಿ ಪ್ರಜ್ವಲ್ ಪೂಜಾರಿ ಆಲ್ವಿನ್ ಡೆಮಲ್ಲು ಮತ್ತು ಕೊಡಚಾದ್ರಿ ಸಂಘಟನೆಯ ಕಾರ್ಯಕರ್ತರು ಉಪಸ್ಥಿತಿ ಇದ್ದರು.
Road accident near Mastikatte -