ಈದ್ ನಮಾಝ್ ನಂತರ Palestine will be Free ಪ್ಲೇ ಕಾರ್ಡ್ ಪ್ರದರ್ಶನ!

Suddilive || Shivamogga/sagara

ಈದ್ ನಮಾಝ್ ನಂತರ Palestine will be Free ಪ್ಲೇ ಕಾರ್ಡ್ ಪ್ರದರ್ಶನ!

Palestine, Free

ಶಿವಮೊಗ್ಗ ಮತ್ತು ಸಾಗರದಲ್ಲಿ ಇಂದು  ಈದುಲ್ ಫಿತ್ರು ನಂತರ ಪ್ಲಕಾರ್ಡ್ ಪ್ರದರ್ಶಿಸಲಾಗಿದೆ. ಪ್ಯಾಲೆಸ್ತೇನ್ ಬೆಂಬಲಿಸಿ ಮತ್ತು ವಕ್ಫ್ ತಿದ್ದುಪಡಿ ಬಿಲಗ ವಿರೋಧಿಸಿ ಬಿತ್ತಿಪ್ರದರ್ಶನ ನಡೆದಿದೆ. 

ಎರಡೂ ನಗರದಲ್ಲಿ ಎಸ್ ಡಿಪಿಐ ಸಂಘಟನೆ ಪ್ಲಕಾರ್ಡ್ ಹಿಡಿದು ವಿಶ್ವದಾದ್ಯಂತ ಮುಸ್ಲೀಂರ ಮೇಲಿನ ದಾಳಿಯನ್ನ ಖಂಡಿಸಿ ಪ್ರದರ್ಶಿಸಲಾಗಿದೆ.

ಒಂದು ತಿಂಗಳ ರಮಝಾನ್ ಉಪವಾಸ ಮುಗಿಸಿ ಮುಸ್ಲಿಂ ಸಮುದಾಯ ಸೋಮವಾರ ನಗರ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮ, ಸಡಗರದಿಂದ ಈದುಲ್ ಫಿತ‌ರ್ ಆಚರಣೆ ಮಾಡಿದರು. 

ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ಸಾಗರದ ಕೆಳದಿ ರಸ್ತೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ನಂತರ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಾಗರ ಶಾಖೆಯ ವತಿಯಿಂದ ಪ್ಯಾಲೆಸ್ಟೈನ್ ಹಾಗೂ ಗಜಾ ಮೇಲೆ ನಡೆಸುತ್ತಿರುವ ಇಸ್ರೇಲ್ ದೇಶ ದಾಳಿಯನ್ನು ತಕ್ಷಣ ನಿಲ್ಲಿಸಬೇಕು ,  ಎಸ್ ಡಿ ಪಿ ಐ ಕೇಂದ್ರ ಮುಖ್ಯಸ್ಥನನ್ನು ಬಂಧಿಸಿರುವ ಈ.ಡಿ ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಕಪ್ಪು ಪಟ್ಟಿ ಧರಿಸುವ  ಮೂಲಕ ಕೇಂದ್ರ ಸರ್ಕಾರ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಾಯಿತು.

ಶಿವಮೊಗ್ಗದ ಎಎ ವೃತ್ತದಲ್ಲಿ ಪ್ಲಕಸರ್ಡ್ ಹಿಡಿದು ಪ್ರದರ್ಶಿಸಲಾಗಿದೆ. 

Palestine will be Free

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close