Suddilive || Shivamogga
ಏ.1 ರಿಂದ ನಂದಿನಿ ಹಾಲಿನ ದರ ಹೆಚ್ಚಳ-Nandini milk price hike from April 1
ರಾಜ್ಯ ಸರ್ಕಾರ ಹಾಲಿನದರವನ್ನ ಏರಿಕೆ ಮಾಡಿ ಆದೇಶಿಸಿದ ಬೆನ್ನಲ್ಲೇ ಆಕ್ಟಿವ್ ಆದ ಹಾಲು ಒಕ್ಕೂಟಗಳು ರಾಜ್ಯ ಸರ್ಕಾರದ ಆದೇಶವನ್ನ ಪಾಲಿಸಲು ಸಭೆ ಸೇರಿ 4 ರೂ ಹೆಚ್ಚಳ ಮಾಡಿ ಆದೇಶಿಸಿದೆ.
ಇಂದು ಅಧ್ಯಕ್ಷ ವಿದ್ಯಾಧರ ನೇತೃತ್ವದಲ್ಲಿ ಸಭೆ ನಡೆಸಿದ ಒಕ್ಕೂಟದ ಸದಸ್ಯರು ಸರ್ಕಾರ ಪ್ರತಿ ಒಂದು ಲೀಟರ್ ಹಾಲನ್ನ 4 ರೂಗಳಿಗೆ ಹೆಚ್ಚಿಸಿ ಆದೇಶಸಿದೆ. ನಂದಿನಿ ವಿವಿಧ ಶ್ರೇಣಿಯ 1000 ಮಿಲಿ ಹಾಗೂ 500 ಮಿಲಿ ಹಾಲಿನ ಪ್ಯಾಕೇಟ್ ಗಳಿಗೆ ನೀಡಲಾಗುತ್ತಿದ್ದ "50 ಮಿಲಿ" ಹೆಚ್ಚುವರಿ ಪ್ರಮಾಣಕ್ಕೆ ಅನ್ವಯವಾಗುವ ರೂ.2/- ಹೆಚ್ಚುವರಿ ದರವನ್ನು ದಿನಾಂಕ:01.04.2025 ರಿಂದ ಅನ್ವಯವಾಗುವಂತೆ ಹಿಂಪಡೆಯಲಾಗಿದೆ ಎಂದು ಶಿಮೂಲ್ ನ ಎಂಡಿ ಎಸ್ ಜಿ ರಾಜಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದರ ಹೀಗಿದೆ
Nandini milk price hike from April 1