Suddilive || Holehonnuru
ಕೂಡಲಿ ಶಂಕರಾಚಾರ್ಯ ಪೀಠದ ಪರಂಪರೆಯ ಬಗ್ಗೆ ಅಪಪ್ರಚಾರ: ಕ್ಷಮಾಪಣೆ ಕೇಳಿದ ವ್ಯಕ್ತಿ-Man apologizes for spreading misinformation about the heritage of the Koodali Shankaracharya Peetha
ಕೂಡಲಿ ಶೃಂಗೇರಿ ಮಹಾ ಸಂಸ್ಥಾನಕ್ಕೆ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಸ್ವಾಮಿಗಳು ಬಂದ ಮೇಲೆ ಪರಂಪರೆಯಲ್ಲಿ ಇಲ್ಲದ ಪೀಠಾಧಿಪತಿಗಳ ಹೆಸರುಗಳನ್ನು ಸೇರಿಸಿ ಸುಳ್ಳು ಪಟ್ಟಿ ತಯಾರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೊಸ್ಟ್ ಮಾಡುತ್ತಿದ ವ್ಯಕ್ತಿ ಮಠದ ಭಕ್ತರಲ್ಲಿ ಕ್ಷಮೇ ಕೇಳಿದ್ದಾರೆ.
ಕೆಲ ದಿನಗಳಿಂದ ಕೂಡ್ಲಿಯ ಶಾರಾದಂಬ ಪೀಠದ ಭಕ್ತರು ನಟರಾಜ್ ಮಣಿಶಿಂಧೆ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿ, ಪೀಠದ ಪರಂಪರೆಯ ಹಳೆಯ ದಾಖಲೆಗಳನ್ನು ನೀಡಿದ್ದರು.
ಪೀಠದ 71 ಗುರುಗಳ ಪಟ್ಟಿ ಇರುವ ಹಳೆಯ ಪುಸ್ತಕ ನೋಡಿದ ನಂತರ ಶ್ರೀಗಳ ಗುರುಪರಂಪರೆ ಬಗ್ಗೆ ಅರಿವಾಗಿದೆ. ನಾನು ಪೂರ್ವಪರ ತಿಳಿಯದೆ ಮಾಡಿದ ಉಲ್ಲೇಖದಿಂದ ಕೂಡಲಿ ಮಠದ ಭಕ್ತರಿಗೆ ನೋವಾಗಿರುವುದು ತಿಳಿದುಬಂದಿದೆ. ಇದಕ್ಕಾಗಿ ನಾನು ಹೃತ್ಪೂರ್ವಕ ಕ್ಷಮೆ ಕೇಳುತ್ತೇನೆ ಮತ್ತು ಯಾವುದೇ ರೀತಿಯ ಅಪಮಾನ ಉಂಟುಮಾಡುವ ಉದ್ದೇಶ ನನಗೆ ಇರಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ. ಅಷ್ಟು ಮಾತ್ರವಲ್ಲದೇ, ಮಾಹಿತಿ ಇಲ್ಲದೆ ಮಾಡಿದ ತಪ್ಪಿಗೆ ನನ್ನ ಮೇಲೆ ಮುಗಿಬಿದ್ದು ಬಹಿರಂಗವಾಗಿ ನಿಂದಿಸಿದ ಯಾರೊಬ್ಬರನ್ನು ಸುಮ್ಮನೆ ಬಿಡುವ ಮಾತಿಲ್ಲ. ನನ್ನ ಮೇಲೆ ಆದ ಮಾನಸಿಕ ದೌರ್ಜನ್ಯಕ್ಕೆ ಕಾನೂನು ಹೋರಾಟ ನಡೆಸುವುದಾಗಿ ೯ ಪುಟಗಳ ಕ್ಷಮಾಪಣೆ ಪತ್ರ ಬರೆದಿದ್ದಾರೆ.
Man apologizes for spreading misinformation