Suddilive || Shivamogga
ಕಾನೂನು ವಿದ್ಯಾರ್ಥಿಗಳ ಬೆಟ್ಟಿಂಗ್ ಗಲಾಟೆ-Law students' betting riot
ಕಾಲೇಜಿನ ವತಿಯಿಂದ ನಡೆದ ಕಬ್ಬಡ್ಡಿ ಪಂದ್ಯಾವಳಿಗೆ ಕಟ್ಟಿದ ಬೆಟ್ಟಿಂಗ್ ವಿಚಾರದಲ್ಲಿ ನಡೆದ ಗಲಾಟೆ ಸುಮೋಟೋ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗುವಂತೆ ಮಾಡಿದೆ. ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಈ ಬಡಿದಾಟ ನಾಗರೀಕ ಸಮಾಜವನ್ನ ತಲೆತಗ್ಗಿಸುವಂತೆ ಮಾಡಿದೆ.
ನಗರದ ಪ್ರತಿಷ್ಠಿತ ಕಾನೂನು ಕಾಲೇಜಿನ ಕಬ್ಬಡ್ಡಿ ಪಂದ್ಯಾವಳಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದಿದೆ. ಈ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಗೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಬೆಟ್ಟಿಂಗ್ ಕಟ್ಟಲು ಪ್ರಚೋದಿಸಿದ್ದಾನೆ. ಬೆಟ್ಟಿಂಗ್ ಕಟ್ಟುವ ವಿಚಾರದಲ್ಲಿ ಬೆಟ್ಟಿಂಗ್ ಗೆ ಒತ್ತಾಯಿಸಿದ ವಿದ್ಯಾರ್ಥಿಯ ಮೇಲೆ ನಂಬಿಕೆ ಇಲ್ಲದ ಕಾರಣ ಮಧ್ಯದಲ್ಲಿ ಮತ್ತೋರ್ವ ಸ್ನೇಹಿತನನ್ನ ಕರೆತಂದು ತಲಾ 5000 ರೂ. ಬೆಟ್ಟಿಂಗ್ ಕಟ್ಟಲಾಗಿದೆ.
ಬೆಟ್ಟಿಂಗ್ ನಲ್ಲಿ ಗೆದ್ದ ವಿದ್ಯಾರ್ಥಿ ತಾನು ಫೋನ್ ಪೇ ಮೂಲಕ 5000 ರೂ. ಹಣವನ್ನ ಹಾಕಿದ ಸ್ನೇಹಿತನಿಗೆ ಬೆಟ್ಟಿಂಗ್ ನಲ್ಲಿ ಸೋತವನ ಹಣ ಕೇಳಿದ್ದಾನೆ. ಹಣ ಹಾಕಿಲ್ಲ ಬಂದ ಮೇಲೆ ಫೋನ್ ಪೇ ಮಾಡುವುದಾಗಿ ಆತ ಹೇಳಿದ್ದಾನೆ. ಸೋತವನಿಂದ ಹಣ ಬಾರದ ಕಾರಣ ಬೆಟ್ಟಿಂಗ್ ನಲ್ಲಿ ಗೆದ್ದ ವಿದ್ಯಾರ್ಥಿ ಹಣ ಕೊಡು ಎಂದು ಪದೇ ಪದೇ ಕೇಳಿದ್ದಾನೆ.
ಇದರಿಂದ ರೋಸಿ ಹೋದ ಸೋತ ವಿದ್ಯಾರ್ಥಿ ಗೆದ್ದ ವಿದ್ಯಾರ್ಥಿಯನ್ನ ಊಟ ಮಾಡುತ್ತಿದ್ದ ವೇಳೆ ಕರೆದುಕೊಂಡು ಬಂದು ನೆಹರೂ ಕ್ರೀಡಾಂಗಣದ ಮುಂಭಾಗದ ನೀಲ್ ಕಮಲ್ ಶೋ ರೂಮ್ ಎದುರು ಗಲಾಟೆ ಮಾಡಿದ್ದಾರೆ. ಈ ವಿಚಾರದಲ್ಲಿ ಗೆದ್ದ ವಿದ್ಯಾರ್ಥಿಯನ್ನ ಸೋತ ವಿದ್ಯಾರ್ಥಿ ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿ 7 ಜನ ವಿದ್ಯಾರ್ಥಿಗಳು ಮತ್ತು 2 ಜನ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ.
ಸಾರ್ವಜನಿಕ ಶಾಂತಿ ಭಂಗದ ವಿಚಾರದಲ್ಲಿ ಸಂತೋಷ್ ಹೆಚ್ ಆರ್, ನಂದೀಶ್, ಕಿರಣ್, ಶಶಾಂಕ್, ಸುಮಂತ್ ಬಿ.ಸಿ ವಿರುದ್ಧ ಸುಮೋಟೋ ಪ್ರಕರಣ ಜಯನಗರ ಪೊಲಿಸ್ ಠಾಣೆಯಲ್ಲಿ ದಾಖಲಾಗಿದೆ. ದೇಶಕ್ಕೆ ಮಾದರಿಯಾಗಬೇಕಿದ್ದ ಕಾನೂನು ವಿದ್ಯಾರ್ಥಿಗಳ ಈ ವರ್ತನೆ ನಾಗರೀಕ ಸಮಾಜವನ್ನ ತಲೆತಗ್ಗಿಸಿದೆ.
Law students' betting riot