ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಕಂಬಳ ರದ್ದು-Kambala to be held in Shivamogga cancelled

 Suddilive || Suddilive

ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಕಂಬಳ ರದ್ದು-Kambala to be held in Shivamogga cancelled

Kambala, cancelled


ಮಲೆನಾಡಿನಲ್ಲಿ ನಿಗದಿಯಾಗಿದ್ದ ಮೊದಲ ಕಂಬಳ ರದ್ದಾಗಿದೆ. ಪ್ರಾಣಿ ದಯ ಸಂಘಟನೆ ಕೋರ್ಟ್‌ ಮೊರೆ ಹೋಗಿರುವ ಹಿನ್ನೆಲೆ ಶಿವಮೊಗ್ಗ ಕಂಬಳ  ರದ್ದುಗೊಳಿಸಲಾಗಿದೆ. ಕೋರ್ಟ್‌ ತೀರ್ಪಿನ ನಂತರ ತೀರ್ಮಾನ ಕೈಗೊಳ್ಳಲು ಕಂಬಳ ಸಮಿತಿ ನಿರ್ಧರಿಸಿದೆ.

ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಏಪ್ರಿಲ್‌ 19 ಮತ್ತು 20ರಂದು ಕಂಬಳ ನಡೆಸಲು ನಿರ್ಧರಿಸಲಾಗಿತ್ತು.

ಕಳೆದ ಬುಧವಾರ ಮೂಡುಬಿದಿರೆಯ ಸೃಷ್ಟಿ ಗಾರ್ಡನ್‌ನಲ್ಲಿ ಕಂಬಳ ಸಮಿತಿ ಸಭೆ ನಡೆಯಿತು. ಇಲ್ಲಿ ಶಿವಮೊಗ್ಗ ಕಂಬಳ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಏಪ್ರಿಲ್

19ರಂದು ಶಿವಮೊಗ್ಗ ಬದಲು ಬೈಂದೂರಿನಲ್ಲಿ ಕಂಬಳ ನಡೆಸುವ ತೀರ್ಮಾನ ಪ್ರಕಟಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಇದೇ ಮೊದಲ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಕಂಬಳ ನಡೆಸಲು ನಿರ್ಧರಿಸಲಾಗಿತ್ತು. ಮಾಚೇನಹಳ್ಳಿಯ 16 ಎಕರೆ ವಿಸ್ತೀರ್ಣದಲ್ಲಿ ಕಂಬಳದ ಟ್ರ್ಯಾಕ್‌ ನಿರ್ಮಿಸಲು ಯೋಜಿಸಲಾಗಿತ್ತು. ಇದಕ್ಕಾಗಿ ಗುದ್ದಲಿ ಪೂಜೆ ನಡೆಸಲಾಗಿತ್ತು. ಸುಮಾರು 100 ಜೋಡಿ ಚಾಂಪಿಯನ್‌ ಕೋಣಗಳು ಭಾಗವಹಿಸಲಿದ್ದವು. 10 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು.

ಶಿವಮೊಗ್ಗ ಕಂಬಳದ ಟ್ರ್ಯಾಕ್‌ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಜಿಲ್ಲಾ ಕಂಬಳ ಸಮಿತಿಗೆ ನ್ಯಾಯಾಲಯದಿಂದ ನೊಟೀಸ್‌ ಜಾರಿಯಾಗಿತ್ತು. ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಹಾಗಾಗಿ ಶಿವಮೊಗ್ಗ ಕಂಬಳವನ್ನು ರದ್ದುಗೊಳಿಸಲಾಗಿದೆ.

Kambala to be held in Shivamogga cancelled

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close