suddilive || Shivamogga
ನಾಳೆ ಸಂಜೆ ಒಳಗೆ ನೀರು ಹರಿಸದಿದ್ದರೆ ಹೊನ್ನಾಳಿ ಬಂದ್-ಆರ್ಭಟಿಸಿದ ರೇಣುಕಾಚಾರ್ಯ-Honnali bandh if water is not supplied tomorrow evening - Renukacharya shouts
ಅಪ್ಪರ್ ತುಂಗ ಮೇಲ್ದಂಡೆ ಯೋಜನೆಯ ನಾಲೆ ಹಾನಿಯಾಗಿದ್ದು ನಾಲೆಯನ್ನನಾಳೆ ಸಂಜೆ ಒಳಗೆ ಸರಿಪಡಿಸಿ ನೀರು ಹರಿಸದಿದ್ದರೆ ಹೊನ್ನಾಳಿ ಬಂದ್, ಕಚೇರಿಗಳ ಮುತ್ತಿಗೆ ಮಾಡುವುದಾಗಿ ಮಾಜಿ ಸಚಿವ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ದಿಗ್ಗೇನಹಳ್ಳಿ ವಿಠಲಾಪುರ ಮಧ್ಯದಲ್ಲಿರುವ ತುಂಗ ನಾಲೆ ಹಾನಿಗೊಳಗಾಗಿದ್ದು ಸರಿಪಡಿಸುವಂತೆ ಆಗ್ರಹಿಸಿ ಕ್ಯಾಸಿನಕೆರೆ ರೈತರು ಶಿವಮೊಗ್ಗದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳನ್ನ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಅಧಿಕಾರಿಗಳನ್ನ ಭೇಟಿ ಮಾಡಿದ ರೈತರು ನಾಲೆ ರಿಪೇರಿ ಮಾಡಿಸಬೇಕು. ಎಷ್ಟುದಿನಗಳ ಒಳಗೆ ಸರಿ ಮಾಡಿಸುತ್ತಾರೆ ಎಂದು ಪ್ರಶ್ನಿಸಿದರು. ಸಿಇಒ ಮಂಗಳವಾರದೊಳಗೆ ನೀರು ಕೊಡುವುದಾಗಿ ತಿಳಿಸಿದ್ದಾರೆ. ನಾಳೆ ನೀರು ಹರಿಯುತ್ತಾ ಎಂದು ನೀರಾವರಿ ಇಲಾಖೆಯ ಎಸ್ ಇಗೆ ಪ್ರಶ್ನಿಸಿದರು.
ಕಳೆದ 8 ತಿಂಗಳ ಹಿಂದೆ ಬಸವನಹಳ್ಳಿಯ ತುಂಗ ನಾಲೆ ಒಡೆದು ಹೋಗಿತ್ತು. 1½ ಕೋಟಿ ವೆಚ್ಚದ ಕಾಮಗಾರಿ ಹಣ ಬೇಕಿತ್ತು. ಇದುವರೆಗೂ ರಿಪೇರಿಗೆ ಹಣ ಬಿಡುಗಡೆಯಾಗಿಲ್ಲ. ಪ್ರವಾಹದ ರೀತಿ ಆಗಿತ್ತು. ಯಾವ ಗುತ್ತಿಗೆದಾರ ಮುಂದೆ ಬರಲಿಲ್ಲ. ಸರ್ಕಾರ ಪಾಪರ್ ಆಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳು ಮಂಗಳವಾರ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಬುಧವಾರ ಕೊಡುವುದಾಗಿ ಅಪ್ಪರ ತುಂಗ ನೀರಾವರಿ ಇಲಾಖೆಯ ಎಸ್ ಇ ಭರವಸೆ ನೀಡಿದರು. ನಾಲೆ ಒಡೆದು 9 ದಿನ ಕಳೆದಿದೆ ನೀರಾವರಿ ಇಲಾಖೆ ಕಣ್ಣುಮುಚ್ಚಿಕುಳಿತಿದೆ ಎಂದು ಮಾಜಿ ಸಚಿವರು ಆರೋಪಿಸಿದರು.
ಸೌಡಿಗಳಿಗೆ ಸಂಬಳ ಇರಲಿ ಅಧಿಕಾರಿಗಳಿಗೆ ಸಂಬಳಕೊಡ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಎಸ್ ಇ ಗಳಾದ ನೀವು ಸ್ಥಳ ಭೇಟಿ ಮಾಡಿಲ್ಲ. ಸಾಸಿವೆ ಹಳ್ಳಿಯ ತನಕ ನೀರು ತಲುಪುವಂತೆ ಕೋರಿದರು. ಕರ್ನಾಟಕ ನೀರಾವರಿ ನಿಗಮಕ್ಕೆ ರಾಜ್ಯ ಸರ್ಕಾರ 5½ ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕಿತ್ತು ಅಂತಹದ್ದು ನಾಲ್ಕು ನಿಗಮದಲ್ಲಿ ನೀರಿಲ್ಲ ಎಂದು ಆಗ್ರಹಿಸಿದರು.
ತಾತ್ಕಾಲಿಕ ವ್ಯವಸ್ಥೆ ಮಾಡಲು ರೇಣುಕಾಚಾರ್ಯ ತಿಳೊಸಿದರು. ನಾಳೆ ಸಂಜೆಯ ಒಳಗೆ ನೀರು ಒದಗಿಸಲು ಮಾಜಿ ಸಚಿವರು ಆಗ್ರಹಿಸಿದರು. ಕೊಡುವುದಾಗಿ ಹೇಳಿದ ಅಧಿಕಾರಿಗೆ ನಿಮಗೆ ನಂಬಿಕೆಯಿಲ್ಲ ಎಂದು ರೇಣಿಕಾಚಾರ್ಯ ತಿಸಿದರು.
300 ಕ್ಯೂಸೆಕ್ ನೀರು ಸಾಸಿವೆಹಳ್ಳಿಯಿಂದ ಮುಂದೆ ಹೋಗುತ್ತಿಲ್ಲ. ಬಸವಾಪುರ,ಕ್ಯಾಸಿನಕೆರೆ, ಕುಳಗಟ್ಟೆಗೆ ಬರಬೇಕು. ಸ್ಥಳಕ್ಕೆ ಭೇಟಿ ನೀಡಿ. ಎಇಇ ಜೊತೆ ನಾನೆ ವರುವೆ ಎರಡು ಪೈಪ್ ಗಳ ಮೂಲಕ ನಾಖೆ ಸಂಜೆಯ ಒಳಗೆ ನೀರು ಕೊಡುವುದಾಗಿ ಎಸ್ ಇ ತಿಳಿಸಿದರು. ಬುಧವಾರದ ಒಳಗೆ ಸರಿಪಡಿಸಿವುದಾಗಿ ತಿಳಿಸಿದರು.
ಒಂದು ವೇಳೆ ನಾಳೆ ಸಂಜೆ ಒಳಗೆ ನೀರು ಬಾರದಿದ್ದರೆ ಮುಂದೆ ಏನು ಎಂದು ಪ್ರಶ್ನಿಸಿದರು. ಬುಧವಾರ ಬೆಳಿಗ್ಗೆ ನಾನೇ ಬರುವೆ ನೋಡೋಣ. ಇಲ್ಲವೆಂದರೆ ಹೊನ್ನಾಳಿ ಬಂದ್, ಸಾಸಿವೆಹಳ್ಳಿ ಮಲೆಬೆನ್ನೂರು ನೀರಾವರಿ ಕಚೇರಿಗಳಮುತ್ತಿಗೆ ಮಾಡುವುದಾಗಿ ಎಂದು ತಿಳಿಸಿದರು.
Honnali bandh if water is not supplied