Suddilive || Shivamogga
ಗೋವುಗಳ ಮಾರಣಹೋಮ-ಕ್ರಮಕ್ಕೆ ಆಗ್ರಹ-Demand for stopping cow slaughter
ಸೋಮಿನಕೊಪ್ಪದ ರೈಲ್ವೆ ಬ್ರಿಡ್ಜ್ ಬಳಿ ರೈಲಿಗೆ ಸಿಲುಕಿ 4 ಗೋವುಗಳ ಮಾರಣ ಹೋಮ ನಡೆದಿದೆ. ರೈಲಿಗೆ ಸಿಲುಕಿ 4 ಹಸುಗಳು ಮತ್ತು ಒಂದು ನಾಯಿ ಜೀವಕಳೆದುಕೊಂಡಿದೆ.
ಈ ಬಗ್ಗೆ ರಾಷ್ಟ್ರಭಕ್ತರ ಬಳಗ ಕೆ.ಈ.ಕಾಂತೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ, ಮಾರಣಹೋಮ ನಡೆದಿರುವುದು ಪಾಲಿಕೆಯ ನಿರ್ಲಕ್ಷದಿಂದಾಗಿ ಎಂದು ಸಂಘಟನೆಯೊಂದು ಆಕ್ರೋಶ ವ್ಯಕ್ತಪಡಿಸಿದೆ.
ಇಂದು ರೈಲ್ವೆ ಓವರ್ ಬ್ರಿಡ್ಜ್ ಬಳಿ ಗೋವುಗಳ ಹತ್ಯೆ ನಡೆದಿದೆ. ರೈಲಿಗೆ ಬಿಡಾಡಿ ಹಸುಗಳು ಸಿಲುಕಿ ಸಾವನ್ನಪ್ಪುತ್ತಿದ್ದರೂ ಶಿವಮೊಗ್ಗ ಮಹಾನಗರ ಪಾಲಿಕೆ ಬಿಡಾಡಿ ಗೋವುಗಳ ರಕ್ಷಣೆ ಮಾಡದೆ ಇರುವುದರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯು ಆಕ್ರೋಶವನ್ನು ವ್ಯಕ್ತಪಡಿಸಿದೆ.
ಹಲವು ಬಾರಿ ಮಹಾನಗರ ಪಾಲಿಕೆಯ ಆಯುಕ್ತರಲ್ಲಿ ಬಿಡಾಡಿ ಹಸುಗಳನ್ನು ಗೋಶಾಲೆಗಳಿಗೆ ಹಾಕಲು ಮತ್ತು ನಗರದಾದ್ಯಂತ ನಾಯಿಗಳ ಹಾವಳಿಯನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದರೂ ಸಹ ನಗರಸಭೆಯವರು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇರುವುದು ಇಂತಹ ಅನಾಹುತಕ್ಕೆ ಕಾರಣ ಎಂದು ಸಂಘಟನೆಯ ರಾಜ್ರಯಾಧ್ಯಕ್ಷ ಪ್ರಸಾದ್. ಎಂ. ಮತ್ತು ಜಿಲ್ಲಾಧ್ಯಕ್ಷ ಮಧುಸೂಧನ್ ಆಗ್ರಹಿಸಿದರು. ತಿಳಿಸಿದ್ದಾರೆ.
ಈ ಕೂಡಲೇ ನಗರಸಭೆಯವರು ಬಿಡಾಡಿ ಹಸುಗಳನ್ನು ಮತ್ತು ನಾಯಿಗಳನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣಾ ವ್ಯವಸ್ಥೆಯನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.
Demand for stopping cow slaughter