ಭದ್ರಜಲಾಶಯದಿಂದ ನೀರು ಹರಿಸಲು ತೀರ್ಮಾನ-ನೀರುಗಳ್ಳರಿಗೆ ಖಡಕ್ ಸೂಚನೆ-Decision to release water from Bhadra reservoir

 Suddilive || Bhadravathi

ಭದ್ರಜಲಾಶಯದಿಂದ ನೀರು ಹರಿಸಲು ತೀರ್ಮಾನ-ನೀರುಗಳ್ಳರಿಗೆ ಖಡಕ್ ಸೂಚನೆ -Decision to release water from Bhadra reservoir-stern warning to water thieves

Bhdra, Dam

ಇಂದು ಮಧ್ಯರಾತ್ರಿ ಭದ್ರ ಜಲಾಶಯದಿಂದ 8000 ಕ್ಯೂಸೆಕ್ ನೀರು ಹರಿಸಲು ತೀರ್ಮಾನಿಸಲಾಗಿದ್ದು ನದಿ ಪಾತ್ರದ ಜನರಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. 

ಮಾ.31 ರಿಂದ 4 ರವರೆಗೆ ಭದ್ರ ಜಲಾಶಯದಿಂದ ಎರಡು ಟಿಎಂಸಿ ನೀರು ಹರಿಸುವುದಾಗಿ ಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ ಬೆನ್ನಲ್ಲೇ ಇಂದು ಸಂಜೆ 6 ರಿಂದ ಏ.4 ರವರೆಗೆ ನದಿಗೆ ನೀರು ಹರಿಸಲಾಗುತ್ತಿದೆ. 

ಕೂಡ್ಲಿ ಸಂಗಮದಲ್ಲಿ ಇಂದು ಜಾತ್ರೆ ನಡೆಯುತ್ತಿದ್ದು ಸಂಜೆಯ ವೇಳೆಗೆ ಜಾತ್ರೆ ಮುಕ್ತಾಯಗೊಳ್ಳಲಿದೆ. ಅದರ ಬೆನ್ನ ಹಿಂದೆಯೇ ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕುಡಿಯುವ ನೀರು ಹರಿಸಲು ತೀರ್ಮಾನಿಸಲಾಗಿದೆ. ಕುಡಿಯುವ ನೀರು ಮತ್ತು ಬೆಳೆಗಳ ರಕ್ಷಣೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. 

186 ಸಾಮರ್ಥ್ಯದ ಭದ್ರ ಜಲಾಶಯದಲ್ಲಿ ಪ್ರಸ್ತುತ 158.9 ಅಡಿ ನೀರು ಸಂಗ್ರಹವಿದೆ. ಈ ಬಾರಿ ಬೇಸಿಗೆಯನ್ನ ಜಲಾಶಯದ ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳುವ ನಿರೀಕ್ಷೆ ಇದೆ. ನದಿಯಿಂದ ರೈತರಾಗಲಿ ಅಥವಾ ಸಾರ್ವಜನಿಕರು ಟ್ಯಾಂಕರ್ ಅಥವಾ ವಿದ್ಯುತ್/ಡಿಸೇಲ್ ಪಂಪ್ ಸೆಟ್ ಗಳಿಂದ ನೀರು ಕೊಂಡಯ್ಯದಂತೆ ಸೂಚಿಸಲಾಗಿದೆ. 

Decision to release water from Bhadra reservoir

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close