Suddilive || Shivamogga
DAR ಡಿವೈಎಸ್ಪಿ ಲೋಕಾ ಬಲೆಗೆ-DAR DYSP Loka Trap
ಕೆಲಸ ನಿಯುಕ್ತಿಗೆ ಪೊಲೀಸ್ ಪೇದೆಯವರಿಂದ ಡಿಎ ಆರ್ ಡಿವೈಎಸ್ಪಿ ಲಂಚದ ಹಣ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಎಸ್.ಪಿ. ಮಂಜುನಾಥ ಚೌಧರಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಡಿಎಆರ್ ಪೊಲೀಸ್ ಸಿಬ್ಬಂದಿಯಿಂದ ಡಿವೈಎಸ್ಪಿ ಕೃಷ್ಣಮೂರ್ತಿ ಎಂಬುವರು 5000 ರೂ. ಹಣ ಪಡೆದ ಹಿನ್ನಲೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಸಿಬ್ಬಂದಿ ಬಳಿ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
DAR DYSP Loka Trap