Suddilive || shivamogga
ನಕಲಿ ಸಹಿ, ನಿವೃತ್ತ ಅಗ್ನಿಶಾಮಕದಳದ ಸಿಬ್ಬಂದಿ ವಿರುದ್ಧ ದೂರು-Complaint filed against retired firefighter for forged signature
ನಿವೃತ್ತ ಅಗ್ನಿ ಶಾಮಕ ದಳದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬಿ.ಟಿ.ನಾಗೇಶ್ ವಿರುದ್ಧ ನಕಲಿ ಸಹಿ ಆರೋಪದ ಅಡಿ ದೂರು ದಾಖಲಾಗಿದೆ.
ಬಿ.ಟಿ.ನಾಗೇಶ್ ಒಂದು ವರ್ಷದ ಹಿಂದೆ ಶಿವಮೊಗ್ಗದ ಅಗ್ನಿಶಾಮಕ ದಳದ ಕಚೇರಿಯಲ್ಲಿ ನಿವೃತ್ತರಾಗಿದ್ದರು. 2020 ರಲ್ಲಿ ಮಾರ್ನಮಿಬೈಲಿನಲ್ಲಿ ವಾಸವಾಗಿದ್ದಾಗ ರೇವತಿ ಎಂಬ 60 ವರ್ಷದ ಮಹಿಳೆ ಪರಿಚಯವಾಗಿದ್ದರು.
ಈ ಮಹಿಳೆಯಿಂದ 2 ಲಕ್ಷ ರೂ. ಹಣವನ್ನ ನಾಗೇಶ್ ತುರ್ತುಅಗಿ ಪಡೆದು ಕಡಿಮೆ ಅವಧಿಯಲ್ಲಿ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ನಗದು ರೂಪದಲ್ಲಿ ಪಡೆದ ನಾಗೇಶ್ ಗೆ ಕೆಲ ಸಮಯ ಬಿಟ್ಡು ಹಣ ವಾಪಾಸ್ ಕೊಡುವಂತೆ ಮಹಿಳೆ ಕೋರಿದ್ದರು. ಅದರಂತೆ ನಾಗೇಶ್ ಒಂದು ಚೆಕ್ ನೀಡಿದ್ದರು.
ಬ್ಯಾಂಕ್ ನ ಕ್ಲಿಯರೆನ್ಸ್ ಗೆ ಹಾಕಿದಾಗ ನಾಗೇಶ್ ನವರ ಸಹಿ ಹೊಂದಾಣಿಕೆಯಾಗುತ್ತಿಲ್ಲ ಎಂದು ವಾಪಾಸ್ ನೀಡಿದ್ದಾರೆ. ಬಿ.ಟಿ ನಾಗೇಶ್ ಉದ್ದೇಶ ಪೂರಕವಾಗಿ ನಕಲಿ ಸಹಿ ಬಳಸಿ ಚೆಕ್ ನೀಡಿರುವುದಾಗಿ ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪಿಸಿಆರ್ ಮೂಲಕ ದೂರುದಾಖಲಿಸಿದ್ದಾರೆ.
Complaint filed against retired firefighter for forged signature