ಕಸಾಪ ಜಿಲ್ಲಾಧ್ಯಕ್ಷರಿಗೆ ಕೇಂದ್ರ ಸಂಸ್ಥೆ ನೋಟೀಸ್

Suddilive || Shivamogga

ಶಿವಮೊಗ್ಗ ಜಿಲ್ಲಾಧ್ಯಕ್ಷರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನೋಟೀಸ್ -Central agency notice to Kasapa District President

Kasapa, notice

ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ಅಡಿಯಲ್ಲಿ ಬರುವ ನಿಯಮ ೭(೮)ರ ಅಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವಗಳಿಗೆ ಧಕ್ಕೆ ತಂದು ಧೈಯೋದ್ದೇಶಗಳಿಗೆ ವಿರುದ್ಧವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕಸಾಪ‌ ಅಧ್ಯಕ್ಷರಾದ ಡಿ.ಮಂಜುನಾಥ್ ಅವರಿಗೆ ಕೇಂದ್ರ ಕನ್ಬಡ ಸಾಹಿತ್ಯ ಪರಿಷತ್ ಷೋಕಾಸ್ ನೋಟೀಸಿ ನೀಡಿದೆ.

ತಮ್ಮ ಸದಸ್ಯತ್ವವನ್ನು (ಸದಸ್ಯತ್ವದ ಸಂಖ್ಯೆ ೭೮೬೭) ಅಮಾನತ್ತಿನಲ್ಲಿರಿಸಲು ವಿವರಣೆಯನ್ನ ಕೇಳಿ ಷೋಕಾಸ್ ನೊಟೀಸ್ ನೀಡಲಾಗಿದೆ. 16 ಅಂಶಗಳ ವಿವರಣೆ ನೀಡಿ ಕೇಂದ್ರ ಕಸಾಪದ ಅಧ್ಯಕ್ಷ ನಾ.ಡೋಜಾ, ಡಾ.ಮಹೇಶ್ ಜೋಶಿ  ನೋಟೀಸ್ ನೀಡಿದ್ದಾರೆ. 

ಕನ್ನಡ ಸಾಂಸ್ಕೃತಿಕ ವೇದಿಕೆಯಲ್ಲಿ ಖಾಸಗಿ ಸಂಸ್ಥೆಗೆ ಅಧ್ಯಕ್ಷರಾಗಿರುವುದು, ಮತ್ತು ಇದರ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನ  ಆಯೋಜನೆ ಮಾಡಿ ಶುಕ್ಷಕರಿಗೆ ರಜೆ ಕೊಡಿಸಲು ಓಓಡಿ ಕೊಡಿ ಎಂದು ಕೇಳಿ ಡಿಡಿಪಿಐಗೆ ಪತ್ರ ಬರದಿರುವುದು. ಇದು ಕಸಾಪ ಕಾರ್ಯಕ್ರಮಕ್ಕೆ ಮಾತ್ರ ಕೇಳಿ ಪತ್ರ ಬರೆಯಲು ಅವಕಾಶವಿದ್ದು ಅದನ್ನ ಗಾಳಿಗೆ ತೂರಿ ಖಾಸಗಿ ಸಂಸ್ಥೆಯ ಕಾರ್ಯಕ್ರಮಕ್ಕೆ ಓಓಡಿ ಕೇಳಿ ಪತ್ರ ಬರೆದಿರುವುದು ಕಾನೂನು ಬಾಹಿರ ಮತ್ತು ಅಧಿಕಾರ ದುರುಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ.

ಅಸಭ್ಯ ವರ್ತನೆ, ಕಾರ್ಯಕಾರಿ ಸಮಿತಿಯಲ್ಲಿ ಹಿರಿಯರಿಗೆ ಅಗೌರವ, ತಮ್ಮ ಅಸಭ್ಯ ವರ್ತನೆಯಿಂದ ಕಸಾಪದ ಮಾನಮರಗಯಾದೆಯನ್ನ‌ ಹರಾಜು ಮಾಡಿದ್ದೀರಿ. ಕಾರ್ಯಕಾರಿ ಸಮಿತಿಯಲ್ಲಿ ಚರ್ವಿತ ಅಂಶಗಳನ್ನ ಚರ್ಚಿಸುತ್ತಾ, ಸಮಿತಿಯ ಮತ್ತು ಕಸಾಪದ ಅಧ್ಯಕ್ಷರ ಘನೆತೆಗೆ ಚ್ಯುತಿ ತರಲಾಗಿದೆ. ಕಾರ್ಯಕಾರಿ ಸಮಿತಿಯ ಕಲಾಪಗಳನ್ನ  ಸುಗಮವಾಗಿ ನಡೆಸಲು ಅವಕಾಶ ನೀಡದಿರುವ ಆರೋಪ, ಪರಿಷತ್ತಿನ ಆರ್ಥಿಕ ಶಿಸ್ತಿನ ಉಲ್ಲಂಘನೆ ಹೊಸ ಗೆ 16 ಅಂಶಗಳನ್ನ ಪ್ರಸ್ಥಾಪಿಸಿ ಷೋಕಾಸ್ ನೋಟೀಸ್ ನೀಡಲಾಗಿದೆ.

Central agency notice to Kasapa District President


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close