Suddilive || Shivamogga
ಭಗೀರಥ ಕ್ರಿಕೆಟರ್ಸ್ ಗೆ ದ್ವಿತೀಯ ಸ್ಥಾನ-Bhagirath Cricketers secured second place
ನಿನ್ನೆ ನಡೆದ ಕೆ ಇ ಕಾಂತೇಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಕಾಂತೇಶ್ ಕಪ್ ಪಂದ್ಯಾವಳಿ ನಡೆಸಲಾಗಿತ್ತು ಪಂದ್ಯಾವಳಿಯಲ್ಲಿ ಒಟ್ಟು 18 ಸಮಾಜಗಳು ಭಾಗವಹಿಸಿದ್ದು ನಮ್ಮ ಉಪ್ಪಾರ ಸಮಾಜದ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಭಗೀರಥ ಕ್ರಿಕೆಟರ್ಸ್ ತೀರ್ಷಿಕೆ ಅಡಿಯಲ್ಲಿ ಕಪ್ ಗೆ ಭಾಗವಹಿಸಿದ್ದು ಒಟ್ಟು 6 ತಂಡವನ್ನು ಸೋಲಿಸಿ ಫೈನಲ್ ಗೆ ಪ್ರವೇಶ ಮಾಡಿದೆವು ಫೈನಲ್ ನಲ್ಲಿ ನೇರ ಹಣ ಹಣಿ ಯಲ್ಲಿ ದ್ವಿತೀಯ ಸ್ಥಾನ ಪಡೆದು 2025 ರ ರನ್ನರಪ್ ರಾಗಿ ಉಪ್ಪಾರ ಸಮಾಜದ ಹಿರಿಮೆ ಹೆಚ್ಚಿಸಿದ್ದಂತಾಯಿತು.
ಫೈನಲ್ ಆಟದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಂಜು ಪಡೆದರೆ ಸೆಮಿ ಫೈನಲ್ ನಲ್ಲಿ ಪವನ್ ಪಡೆದಿರುತ್ತಾರೆ..ಒಟ್ಟಾರೆ ಭಗೀರಥನ ಕೃಪೆ ಸಮಾಜದ ಹಿರಿಯರ ಆಶೀರ್ವಾದದಿಂದ ಕ್ರೀಡಾಪಟುಗಳ ಶ್ರಮದಿಂದ ಕಪ್ ಗೆಲ್ಲಲು ಸಾಧ್ಯವಾಯಿತು.... ತಂಡದ ಮ್ಯಾನೇಜ್ಮೆಂಟ್ ಆಗಿ ಮುರಳಿ ಹೆಚ್ ಸಣ್ಣಕ್ಕಿ ಮುನ್ನಡೆಸಿದ್ದಾರೆ, ತಂಡದ ನಾಯಕ ಸಂಜು, ಉಪನಾಯಕ ಮನು , ಹಾಗೂ ಪವನ,ಭರತ್ ಷಣ್ಮುಖಪ್ಪ, ಕಾರ್ತಿಕ್, ಗಿರೀಶ್, ಸಂಜಯ್, ದರ್ಶನ್, ಕಾರ್ತಿಕ್, ಕುಮಾರ, ರಾಜೀವ, ರಾಮು, ಮನೋಜ್, ನರೇಂದ್ರ, ಮಂಜುನಾಥ್, ಲೋಹಿತ್, ರಾಕೇಶ್, ಸಾಗರ್,
ಪ್ರಮೋದ್, ಮಂಜು, ಕಾರ್ತಿಕ್ ಗೆಲುವಿನ ರೂವಾರಿಗಳಾಗಿರುತ್ತಾರೆ...ಪರಮ ಪೂಜ್ಯ ಶ್ರೀ ಶ್ರೀ ಪುರುಷೋತ್ತಮ ನಂದ ಪುರಿ ಮಹಾಸ್ವಾಮಿಗಳು, ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘ, ಹಾಗೂ ಕರ್ನಾಟಕ ರಾಜ್ಯ ಯುವ ಘಟಕದವರು ಎಲ್ಲಾ ಗ್ರಾಮದ ಗ್ರಾಮಸ್ಥರುಗಳು ಅಭಿನಂದಿಸಿದ್ದಾರೆ.
Bhagirath Cricketers secured second place