ಮೆಗ್ಗಾನ್ ನಲ್ಲಿ ವೈದ್ಯರ ಬೈಕೇ ಕಳುವು!

 Suddilive || Shivamogga

ಮೆಗ್ಗಾನ್ ನಲ್ಲಿ ವೈದ್ಯರ ಬೈಕೇ ಕಳುವು-A doctor's bike was stolen in Meggan!

Bike, stolen

ಮೆಗ್ಗಾನ್ ಆಸ್ಪತ್ರೆಯಲ್ಲಿ ಪಾಂರ್ಕ್ ಮಾಡಿದ್ದ  ಎರಡು ಬೈಕ್ ಗಳು  ಕಳುವಾಗಿದೆ. ಆಸ್ಪತ್ರೆಯ ವೈದ್ಯರ ಬೈಕ್ ಗಳೇ  ಕಳುವಾಗಿರೋದು ಅಚ್ಚರಿ ಮೂಡಿಸಿದೆ. 

ಮೆಗ್ಗಾನ್ ಅಸ್ಪತ್ರೆಯ ಪಾರ್ಕಿಂಗ್ ನಲ್ಲಿಟ್ಟು ಡಾ.ಅಭಿಷೇಕ್ ಕೆಲಸಕ್ಕೆ ಹೋಗಿದ್ದರು. ವಾಪಾಸ್ ಬಂದು ನೋಡಿದಾಗ ಲಾಕ್ ಮಾಡಿದ ಕೆಎ 14 ವೈ 9366 ಕ್ರಮ ಸಂಖ್ಯೆ ವಾಹನ ನಾಪತ್ತೆಯಾಗಿತ್ತು. 

ಅದರಂತೆ ಡಾ ರವಿಕುಮಾರ್ ಅವರ ಬೈಕ್ ನ್ನ ಕಳುವು ಮಾಡಲಾಗಿದೆ. ಮಾ.21 ರಂದು ಮೆಗ್ಗಾನ್ ನಲ್ಲಿ ಆಡಳಿತ ವಿಭಾಗದ ಕಚೇರಿ ಎದುರಿನ ಎಡಭಾಗದಲ್ಲಿ  ವೈದ್ಯರು  ಪಾರ್ಕ್ ಮಾಡಲಾದ ಯುಪಿ-55 ಜೆಡ್ 3370 ಕ್ರಮ ಸಂಖ್ಯೆಯ ಯಮಹ ಎಸ್ ಜೆಡ್ ಬೈಕ್ ಕಳುವಾಗಿದೆ. 

ವೈದ್ಯರ ವಾಹನಗಳೆ ಕಳುವಾದರೆ, ಉಳಿದವರ ಪಾಡೇನು? ಇಲ್ಲಿ ಕೆಲವೊಂದುಕಡೆ ಪಾರ್ಕಿಂಗ್ ಟೆಂಡರ್ ಆದರೂ ಪಾರ್ಕಿನಿಂದಲೇ ಬೈಕ್ ಗಳು ಕಳುವಾದ ಉದಾಹರಣೆಗಳಿವೆ. ಸಿಸಿ ಟಿವಿ ಕ್ಯಾಮೆರಾಗಳು ಎಲ್ಲೂ ಹೊರಗಡೆ ಇಲ್ಲವಾಗಿದೆ. ಪಾರ್ಕಿಂಗ್ ಲಾಟನಲ್ಲೇ ಬೈಕ್ ಕಳುವಾಗಿರುವ ಘಟನೆಗಳು ನಡೆದಾಗ ಬೈಕ್ ಕಳುವು ಮಾಮೂಲಿ ಎಂಬಂತಾಗಿದೆ. 

A doctor's bike was stolen in Meggan!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close