suddilive || Shivamogga
ಸಂಭ್ರಮ ಮತ್ತು ಸಡಗರದ ರಂಜಾನ್- A Ramadan of celebration and excitement
ಶಿವಮೊಗ್ಗದಲ್ಲಿ ಪವಿತ್ರ ರಂಜಾನ್ ಹಬ್ಬವನ್ನ ಮುಸ್ಲೀಂ ಸಮುದಾಯದಿಂದ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈದ್ಗಾ, ಹಾಗೂ ಇತರೆ ಪ್ರಾರ್ತನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಆಚರಣೆ ನಡೆದಿದೆ.
ನಗರದ ಡಿಸಿ ಕಚೇರಿ ಎದುರಿನ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ತಬ್ಬಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನ ಕೋರಲಾಯಿತು. ಬೆಳಿಗ್ಗೆ 9 ಗಂಟೆಗೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಆರಂಭವಾಗಿದೆ. ಸುಮಾರು 30 ನಿಮಿಷ ಪ್ರಾರ್ಥನೆ ಸಲ್ಲಿಸಿ ನಂತರ ಹಣ ಸಂಗ್ರಹಿಸಲಾಯಿತು.
A Ramadan of celebration and excitement