![]() |
A man has been arrested by Doddapet police for misbehaving with a woman. |
ಸುದ್ದಿಲೈವ್/ಶಿವಮೊಗ್ಗ
ಮಹಿಳೆಯೊಂದಿಗೆ ವ್ಯಕ್ತಿಯೋರ್ವ ಅನುಚಿತ ವರ್ತನೆ ಆರೋಪದ ಅಡಿ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ರಾತ್ರಿ ಸುಮಾರು 9-50 ಗಂಟೆಯ ಹೊತ್ತಿಗೆ ಮುಸ್ಲೀಂ ಕುಟುಂಬ ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಪತಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ದ್ವಿಚಕ್ರ ವಾಹನ ಪಾರ್ಕಿಂಗ್ ಗೆ ಹೋಗಿ ವಾಹನ ತರಲು ಮುಂದಾಗಿದ್ದಾರೆ.
ಮಹಿಳೆ ಬಸ್ ನಿಲ್ದಾಣದ ಮುಂಭಾಗ ನಿಂತಾಗ ವ್ಯಕ್ತಿಯೋರ್ವ ಬಂದು ಮಹಿಳೆಗೆ ದರವೆಷ್ಟು ಎಂದು ಕೇಳಿದ್ದಾನೆ. ಮಹಿಳೆ ಅಷ್ಟು ಹೊತ್ತಿಗೆ ಆತನ ಜನ್ಮ ಜಾಲಾಡಿದ್ದಾಳೆ. ಈ ವೇಳೆ ಆಟೋ ಚಾಲಕರು ಮುತ್ತಿಕೊಂಡಿದ್ದಾರೆ.
ಈ ವೇಳೆ ಮಹಿಳೆಯ ದರ ಕೇಳುವ ಸಾಹಸಕ್ಕೆ ಮುಂದಾಗಿದ್ದ ವ್ಯಕ್ತಿ ತನ್ನನ್ನ ತಾನು ಶಿಕ್ಷಕ, ನಾನು ಹಾಗೆ ಕೇಳಿಲ್ಲ. ಕೇಳಿದ್ದರೆ ಕ್ಷಮಿಸಿಬಿಡಿ ಎಂದು ಗೋಗರಿದಿದ್ದಾನೆ. ಅಷ್ಟು ಹೊತ್ತಿಗೆ ದೊಡ್ಡಪೇಟೆ ಪೊಲೀಸರು ಬಂದು ಆತನನ್ನ ವಶಕ್ಕೆ ಪಡೆದಿದ್ದಾರೆ.
ಇವಿಷ್ಟು ಸ್ಥಳೀಯರು ನೀಡಿರುವ ಪ್ರಾಥಮಿಕ ಮಾಹಿತಿಯಾಗಿದೆ. ಈ ಕುಟುಂಬ ಯಾವುದು, ಆತ ಯಾರು? ಎಂಬುದರ ಬಗ್ಗೆ ಎಫ್ ಐಆರ್ ದಾಖಲಾದ ಮೇಲೆ ವಿವರವಾಗಿ ಬರೆಯಲಾಗುವುದು