ಸುದ್ದಿಲೈವ್/ಶಿವಮೊಗ್ಗ
ಹಾಡಹಗಲೇ ಬಸ್ ಚಾಲಕನಿಗೆ ಚಾಕುವಿನಿಂದ ಯುವಕನಿಗೆ ಇರಿದಿರುವ ಘಟನೆ ವರದಿಯಾಗಿದೆ. ಚಾಕು ಇರಿತಕ್ಕೆ ಒಳಗಾದವನನ್ನ ಸಿಟಿ ಬಸ್ ಚಾಲಕ ರವಿ ಕುಮಾರ್(34) ಎಂದು ಗುರುತಿಸಲಾಗಿದೆ.
ಅಡುಗೆ ಕಂಟ್ರಾಕ್ಟ್ ಅರುಣ್ ಎಂಬುವವನಿಂದ ಚಾಕುವಿನಿಂದ ಇರಿದ ಆರೋಪಿ ಎಂದು ಗುರುತಿಸಲಾಗಿದೆ. ನೋಡು ನೋಡುತ್ತಲೇ ಅಡುಗೆ ಕಂಟ್ರ್ಯಾಕ್ಟರ್ ಅರುಣ್ ಚಾಲಕ ರವಿಗೆ ಕವರ್ ನಲ್ಲಿದ್ದ ಖಾರದ ಪುಡಿಯನ್ನ ಉಗ್ಗಿ ಚಾಕುವಿನಿಂದ ಇರಿದಿದ್ದಾನೆ.
ಶಿವಮೊಗ್ಗ ನಗರದ ಶರಾವತಿ ನಗರದ ೩ ನೇ ತಿರುವಿನಲ್ಲಿ ಘಟನೆ ನಡೆದಿದೆ. ಹಳೆಯ ದ್ವೇಶದ ಹಿನ್ನಲೆಯಲ್ಲಿ ಚಾಕು ಇರಿತ ಉಂಟಾಗಿದೆ ಎನ್ನಲಾಗಿದೆ. ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರವಿಕುಮಾರ್ ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಧ್ಯಕ್ಕೆ ಪ್ರಾಣಾಪಾಯದಿಂದ ಚಾಲಕ ರವಿಕುಮಾರ್ ಪಾರಾಗಿರುವುದಾಗಿ ತಿಳಿದು ಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾದರೂ ಹುಡುಗಿ ವಿಚಾರದಲ್ಲಿ ಈ ಗಲಾಟೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
![]() |
An incident of a young man being stabbed by a bus driver in the wee hours of the morning has been reported. The victim has been identified as city bus driver Ravi Kumar (34). |