ಸುದ್ದಿಲೈವ್/ಶಿವಮೊಗ್ಗ
ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಪಿಡಿಒಗಳ ನಕಲಿ ಸಹಿ ಮಾಡಿ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗ ನಗರ ಪೊಲೀಸರು ಮೂವರನ್ನ ಬಂಧಿಸಿದ್ದಾರೆ.
ಶಿವಮೊಗ್ಗದ ಸೋಗಾನೆಯಲ್ಲಿ ವಿದ್ಯಾನಗರದ ವಸಂತ್ ಕುಮಾರ್ ಎಂಬಾತ ಮನೆ ಕಟ್ಟಲು ಮುಂದಾಗಿದ್ದು ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಮ ಪಂಚಾಯಿತಿಯಿಂದ ನೋ ಅಬ್ಜೆಕ್ಷನ್ ಸರ್ಟಿಫೀಕೇಟ್ (NOC) ಪಡೆಯಬೇಕಿತ್ತು.
ಆದರೆ ನೋ-ಅಬ್ಜೆಕ್ಷನ್ ಸರ್ಟಿಫಿಕೇಟ್ ಪಡೆಯಲು ವಸಂತ್ ಕುಮಾರ್ ಗೆ ಬಿದರೆ ಗ್ರಾಮದ ರಾಕೇಶ್, ಮಂಡೇನ ಕೊಪ್ಪದ ನಿವಾಸಿ ಪ್ರಶಾಂತ್ ನಕಲಿ ಎನ್ ಒಸಿ ಪತ್ರ ಸೃಷ್ಠಿಸಿ ಇಲಾಖೆಗೆ ನೀಡಿದ್ದರು.
ಈ ಪ್ರಕರಣ ಅಧ್ಯಕ್ಷರು ಮತ್ತು ಪಿಡಿಒ ಗಮನಕ್ಕೆ ಬಂದಿದೆ. ತಕ್ಷಣವೇ ತುಂಗನಗರದ ಪೊಲೀಸರಿಗೆ ದೂರು ನೀಡಿದ್ದಾರೆ. ವಸಂತ್ ಕುಮಾರ್, ರಾಕೇಶ್ ಮತ್ತು ಪ್ರಶಾಂತ್ ಅವರನ್ನ ಬಂಧಿಸಿದ್ದಾರೆ. ನಕಲಿ ಎನ್ ಒಸಿ ಪತ್ರ ಪಡೆಯುವ ವಿಷಯದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ.