![]() |
N Umapathy unanimously elected as Professional Director of Shimoga Housing Cooperative Society |
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಗೆ ವೃತ್ತಿಪರ ನಿರ್ದೇಶಕರಾಗಿ ಎನ್ ಉಮಾಪತಿ ಸರ್ವಾನುಮತದಿಂದ ಆಯ್ಕೆ
ನಗರದ ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಶತಮಾನೋತ್ಸವದ ಮೊಟ್ಟ ಮೊದಲ ಆಡಳಿತ ಮಂಡಳಿಯ ಸಭೆಯಲ್ಲಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ಸೊಸೈಟಿಯ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪನವರ ಅಧ್ಯಕ್ಷತೆಯಲ್ಲಿ ವೃತ್ತಿಪರ ನಿರ್ದೇಶಕರಾಗಿ ಎನ್ ಉಮಾಪತಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಸಿ ಹೊನ್ನಪ್ಪ, ಕೋಶಾಧ್ಯಕ್ಷರಾದ ಕೆ ರಂಗನಾಥ್, ನಿರ್ದೇಶಕರುಗಳಾದ ಉಮಾ ಶಂಕರ್ ಉಪಾಧ್ಯಾಯ, ಎಸ್ ಪಿ. ಶೇಷಾದ್ರಿ, ನರಸಿಂಹ ಗಂಧದಮನೆ,ನಟರಾಜ್ ಶಾಸ್ತ್ರಿ, ನಿರ್ಮಲಾ ಕಾಶಿ, ಎಮ್ ಆರ್ ಪ್ರಕಾಶ್, ಎಂ ಕುಮಾರ್, ಕೆ.ಜಿ ರಾಘವೇಂದ್ರ, ಕೆ ಎಸ್ ವೇದಾವತಿ, ಬಿ ಎಸ್ ನಾಗರಾಜ್ ಹಾಗೂ ಸೊಸೈಟಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು