![]() |
Bhadravati rural police have raided an illegal butcher shop. Police raided an illegal slaughterhouse and rescued four cows. But the accused is absconding. |
ಸುದ್ದಿಲೈವ್/ಭದ್ರಾವತಿ
ಅಕ್ರಮ ಕಸಾಯಿ ಖಾನೆಯ ಮೇಲೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಕಸಾಯಿ ಖಾನೆಯ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ಕು ಗೋವುಗಳನ್ನ ರಕ್ಷಿಸಿದ್ದಾರೆ. ಆದರೆ ಆರೋಪಿ ಪರಾರಿಯಾಗಿದ್ದಾನೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಣಬಘಟ್ಟದಲ್ಲಿ ನಾಸೀರ್ ಯಾನೆ ಶಕ್ತಿ ಎಂಬಾತ ಬೊಲೆರೋದಲ್ಲಿ ಗೋಮಾಂಸ ಮಾರಾಟದ ಹಿನ್ನಲೆಯಲ್ಲಿ ಬೊಲೆರೋದಲ್ಲಿ ಹಿಂಸಾತ್ಮಕವಾಗಿ ನಾಲ್ಕು ಗೋವುಗಳನ್ನ ತರುತ್ತಿದ್ದಾನೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಪೊಲೀಸರನ್ನಕಂಡ ನಾಸೀರ್ ಓಡಿಹೋಗಿದ್ದಾನೆ. ಎರಡು 2-3 ವರ್ಷದ ಮತ್ತು 4-6 ವರ್ಷದ ಹೋರಿ ಕರಗಳನ್ನ ಪೊಲೀಸರು ರಕ್ಷಿಸಿದ್ದಾರೆ.