ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನಿನ್ನೆ ಪರಿಷತ್ ಸಭಾಂಗಣದಲ್ಲಿ ಆಯುಕ್ತರಾದ ಕವಿತಾ ಯೋಗಪ್ಪನವರ್ ಅಧ್ಯಕ್ಷತೆಯಲ್ಲಿ ಕಾರ್ಮಿಕರನ್ನ ಗುರುತಿಸಿ ಸನ್ಮಾನ ಮತ್ತು ಪ್ರೋತ್ಸಹಿಸುವ ಕೆಲಸ ನಡೆದಿದೆ. ಸರಳ ಸಮಾರಂಭದಲ್ಲಿ ಪಾಲಿಕೆ ಪೌರಕಾರ್ಮಿಕರನ್ನ ಮತ್ತು ಸಿಬ್ಬಂದಿಗಳನ್ನ ಸನ್ಮಾನಿಸಲಾಯಿತು.
1. 01-01-2025 ಕ್ಕೆ ಅನ್ವಯವಾಗುವಂತೆ 5 ಜನ ದ್ವಿತಿಯ ದರ್ಜೆ ಸಹಾಯಕ ಹುದ್ದೆಯಿಂದ ಪ್ರಥಮ ದರ್ಜೆ ಸಹಾಯಕರಾಗಿ ಮುಂಬಡ್ತಿ ನೀಡಿದ್ದು, ಒಬ್ಬರು ಅಟೆಂಡರ್ ಹುದ್ದೆಯಿಂದ ರಿಂದ ದ್ವಿತಿಯ ದರ್ಜೆ ಸಹಾಯಕ ಮುಂಬಡ್ತಿ ನೀಡಿದ್ದು ಹಾಗೂ 7 ಜನ ಪೌರಕಾರ್ಮಿಕ ಹುದ್ದೆಯಿಂದ ಸ್ಯಾನಿಟೈಸರ್ ಸೂಪರವೈಸರ್ ಹುದ್ದೆಗೆ ಹಾಗೂ 2 ಜನ ಕ್ಲೀನರ್ ಹುದ್ದೆಯಿಂದ ಸ್ಯಾನಿಟೈಸರ್ ಸೂಪರವೈಸರ್ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಪತ್ರ ವಿತರಿಸಲಾಯಿತು.
2. ಇಬ್ಬರಿಗೆ ಅನುಕಂಪ ಆಧಾರದ ಮೇರೆಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು. 3 ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ 24 ಪೌರ ಸೇವಾ ನೌಕರರಿಗೆ ಪಾಲಿಕೆ ವತಿಯಿಂದ ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
4.ಶ್ರೀಮತಿ ನಾಗಲಕ್ಷ್ಮಿ ಕಛೇರಿ ವ್ಯವಸ್ಥಾಪಕರು ಹಾಗೂ ನಳಿನ, ಪ್ರಥಮ ದರ್ಜೆ ಸಹಾಯಕ ಹಾಗೂ ಆಡಳಿತ ವಿಭಾಗ, ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ ಇವರಿಗೆ 2024-25 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಕರ್ನಾಟಕ ನಾಗರಿಕ ಸೇವಾ ವಲಯದಲ್ಲಿ ಸಲ್ಲಿಸಿದ ಶ್ಲಾಘನೀಯ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 76 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ “ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ” ಯನ್ನು ನೀಡಿ ಗೌರವಿಸಿರುವುದಕ್ಕೆ ಮಹಾನಗರ ಪಾಲಿಕೆ ವತಿಯಿಂದ ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು
5. ಶ್ರೀ ಅನಿಲ.ಸಿ ಕಂಪ್ಯೂಟರ್ ಆಪರೇಟರ್, ಚುನಾವಣೆ ವಿಭಾಗ, ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ ಇವರಿಗೆ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ರ ಕಾರ್ಯದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿರುವುದನ್ನು ಪರಿಗಣಿಸಿ 25ನೇ ಜನವರಿ 2025 ರಂದು ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಸಂದರ್ಭದಲ್ಲಿ “ ಜಿಲ್ಲಾ ಅತ್ಯುತ್ತಮ ಕಂಪ್ಯೂಟರ್ ಆಪರೇಟರ್-2025 ಪ್ರಶಸ್ತಿ” ನೀಡಿ ಗೌರವಿಸಿರುವುದಕ್ಕೆ ಮಹಾನಗರ ಪಾಲಿಕೆ ವತಿಯಿಂದ ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
6. ಕಳೆದ 5 ವರ್ಷಗಳಿಂದ ಚುನಾವಣಾ ಶಾಖೆಯಲ್ಲಿ ವಿವಿಧ ಚುನಾವಣೆಗಳಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಬಿಡುಗಡೆ ಹೊಂದಿದ ನಿವೃತ್ತ ತಹಶಿಲ್ದಾರ್ ರಾದ ಶ್ರೀ ಗೋಪಿನಾಥ್ ಟಿ ಮತ್ತು ಶ್ರೀ ಸುಭಾಷ್ ಪುಲಾರಿ ಹಾಗೂ ನಿವೃತ್ತ ಶಿರಸ್ತೇದಾರರಾದ ಶ್ರೀ ಮೈಲಾರಯ್ಯ ಬಿ ಎಸ್ ರವರಿಗೆ ಪಾಲಿಕೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
7.ಶ್ರೀಮತಿ ನಾಗರತ್ನ, ಪೌರ ಕಾರ್ಮಿಕ ರವರು ವಾಸಿಸುತ್ತಿರುವ ಮನೆಗೆ ಆಕಸ್ಮಿಕ ಬೆಂಕಿ ಸಂಭವಿಸಿ ಆದ ನಷ್ಟಕ್ಕೆ ಮಹಾನಗರಪಾಲಿಕೆಯ ಎಲ್ಲಾ ಶಾಖೆಯ ಅಧಿಕಾರಿ/ನೌಕರರು ನೀಡಿದ 1.20 ಲಕ್ಷ ರೂ. ಗಳ ಸಹಾಯಧನದಲ್ಲಿ ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ, ಉಪ ಆಯುಕ್ತರು (ಆಡಳಿತ) ರಾದ ಶ್ರೀ ತುಷಾರ್ ಬಿ ಹೊಸೂರ್. ಉಪ ಆಯುಕ್ತರು (ಅಭಿವೃದ್ದಿ) ರಾದ ಶ್ರೀ ಲಿಂಗೇಗೌಡ, ಉಪ ಆಯುಕ್ತರು(ಕಂದಾಯ) ರಾದ ಶ್ರೀ ಮಂಜುನಾಥ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಗೋವಿಂದ ಹಾಗೂ ಮಹಾನಗರಪಾಲಿಕೆ ಎಲ್ಲಾ ವಿಭಾದ ಅಧಿಕಾರಿ/ನೌಕರರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.