ಯುವ ಕಾಂಗ್ರೆಸ್‍ನ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಹರ್ಷಿತ್ ಗೌಡ ಆಯ್ಕೆ

Harshit Gowda has been elected as the District President in the recently held Shimoga District Youth Congress elections. Harshit Gowda won by a huge margin of 33,408 votes and got 48,473. This is the largest margin of victory in the history of elections for the Youth Congress.


ಸುದ್ದಿಲೈವ್/ಶಿವಮೊಗ್ಗ

ಇತ್ತೀಚೆಗೆ ನಡೆದ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‍ನ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಹರ್ಷಿತ್ ಗೌಡ ಆಯ್ಕೆಯಾಗಿದ್ದಾರೆ. ಹರ್ಷಿತ್ ಗೌಡ ಇವರು ಭರ್ಜರಿ 33,408 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು,  48,473 ಪಡೆದಿದ್ದಾರೆ. ಯುವ ಕಾಂಗ್ರೆಸ್‍ನ ಚುನಾವಣೆಯ ಇತಿಹಾಸದಲ್ಲೇ ಇದು ಭಾರೀ ಮತಗಳ ಅಂತರದ ಜಯವಾಗಿದೆ.

ಕಾಂಗ್ರೆಸ್ ಪಕ್ಷವು ಪದಾಧಿಕಾರಿಗಳ ಆಯ್ಕೆಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲೇ ನಡೆಸುತ್ತಾ ಬಂದಿದೆ. ಅದರಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನೂ ಚುನಾವಣೆಯ ಪ್ರಕ್ರಿಯೆಯ ಮೂಲಕವೇ ಆಯ್ಕೆ ಮಾಡುತ್ತಾ ಬಂದಿದೆ. ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‍ನ ಚುನಾವಣಾ ಪ್ರಕ್ರಿಯೆಯು 2024ರ ಆಗಸ್ಟ್ 20ರಿಂದ ಸೆಪ್ಟಂಬರ್ 22ರ ವರೆಗೆ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 1,22,144 ಮತದಾರರು ನೋಂದಣಿಯಾಗಿದ್ದರು. 

ಇದರಲ್ಲಿ ತಿರಸ್ಕತಗೊಂಡು ಅಂತಿಮವಾಗಿ 64,081 ಅರ್ಹ ಮತದಾರರು ಉಳಿದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಹರ್ಷಿತ್ ಗೌಡ ಮತ್ತು ಹಿಂದಿನ ಅಧ್ಯಕ್ಷರಾಗಿದ್ದ ಹೆಚ್.ಪಿ. ಗಿರೀಶ್ ನಡುವೆ ನಡೆದ ಹಣಾಹಣಿಯಲ್ಲಿ ಹರ್ಷಿತ್ ಗೌಡ 48,473 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ 2ನೇ ಸ್ಥಾನ ಪಡೆದ ಹೆಚ್.ಪಿ. ಗಿರೀಶ್ 15,065 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಚರಣ್ ಜೆ. (10,241), ಪ್ರಥಮ ಉಪಾದ್ಯಕ್ಷರಾಗಿ ಲೋಕೇಶ್ ಬಿ. (3266), ದ್ವಿತೀಯ ಉಪಾಧ್ಯಕ್ಷರಾಗಿ ವಿನಯ್ ತಾಂಡ್ಲೆ (824), ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಎಸ್. (6,478) ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನಿತಿನ್ ಈ.ಟಿ. (2,365) ಆಯ್ಕೆಯಾಗಿದ್ದಾರೆ.

ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಹಮ್ಮದ್ ಶಫಿ (12,105), ಉಪಾಧ್ಯಕ್ಷರಾಗಿ ಅಲ್ತಾಫ್ ಅಹ್ಮದ್ (2,727), ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಪೂರ್ಣೇಶ್ ಜಿ.ಪಿ. (6,200), ಉಪಾಧ್ಯಕ್ಷರಾಗಿ ಸಂದೀಪ್ ಗೌಡ ಬಿ.ಜಿ. (1,563), ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಹೇಂದ್ರ ಹೆಚ್.ಜಿ. (1,528), ಉಪಾಧ್ಯಕ್ಷರಾಗಿ ಉಮೇಶ ಜಿ. (898), ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಂಜುನಾಯ್ಕ (9,196), ಉಪಾಧ್ಯಕ್ಷರಾಗಿ ಸಾಜಿದ್ ಆಲಿ (2,214), ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ (403), ಉಪಾಧ್ಯಕ್ಷರಾಗಿ ಪ್ರದೀಪ್ ಕುಮಾರ್ (205) ಆಯ್ಕೆಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಬ್ಲಾಕ್ ಅಧ್ಯಕ್ಷರುಗಳಾಗಿ ಹದಿನಾಲ್ಕು ಜನ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಉತ್ತರ ಬ್ಲಾಕ್ ಅಧ್ಯಕ್ಷರಾಗಿ ಗಿರೀಶ್, ದಕ್ಷಿಣ ಬ್ಲಾಕ್‍ಗೆ ಮಹಮ್ಮದ್ ಗೌಸ್, ಶಿವಮೊಗ್ಗ ಗ್ರಾಮಾಂತರ  ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರು ಬ್ಲಾಕ್‍ಗೆ ಪ್ರವೀಣ್ ಕುಮಾರ್ ಡಿ.ಟಿ., ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಶಶಿಕುಮಾರ್ ಕೆ., ಭದ್ರಾವತಿ ಕ್ಷೇತ್ರದ ಭದ್ರಾವತಿ ನಗರ ಬ್ಲಾಕ್‍ಗೆ ಅಭಿಷೇಕ್ ಜೆ., ಭದ್ರಾವತಿ ಗ್ರಾಮಾಂತರ ಬ್ಲಾಕ್‍ಗೆ ಮಕ್ಸೂದ್ ಅಹ್ಮದ್, ತೀರ್ಥಹಳ್ಳಿ ಕ್ಷೇತ್ರದ ನಗರ ಬ್ಲಾಕ್‍ಗೆ ಶ್ರೇಯಸ್ ರಾವ್, ಗ್ರಾಮಾಂತರ ಬ್ಲಾಕ್‍ಗೆ ರವಿಕುಮಾರ್ ಹೆಚ್.ಡಿ., ಸಾಗರ ಕ್ಷೇತ್ರದ ಸಾಗರ ಬ್ಲಾಕ್‍ಗೆ ಸದ್ದಾಂ ಹುಸೇನ್, ಹೊಸನಗರ ಬ್ಲಾಕ್‍ಗೆ ವಿಜಯಕುಮಾರ್ ಎಂ.ಎನ್., ಸೊರಬ ಕ್ಷೇತ್ರದ ಸೊರಬ ಬ್ಲಾಕ್‍ಗೆ ಯಶೋಧರ, ಆನವಟ್ಟಿ ಬ್ಲಾಕ್‍ಗೆ ಹರೀಶ್, ಶಿಕಾರಿಪುರ ಕ್ಷೇತ್ರದ ಶಿಕಾರಿಪುರ ಬ್ಲಾಕ್‍ಗೆ ಶಿವು ಹೆಚ್.ಎಂ., ಶಿರಾಳಕೊಪ್ಪ ಬ್ಲಾಕ್‍ಗೆ ಮಹಮ್ಮದ್ ಅತಿಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಯುವ ಕಾಂಗ್ರೆಸ್ ಯುವಜನರ ಸಮಸ್ಯೆಗಳಿಗೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದು, ನೂತನವಾಗಿ ಆಯ್ಕೆಯಾಗಿ ಬಂದಿರುವ ಪದಾಧಿಕಾರಿಗಳ ತಂಡ ಇದೇ ನಿಟ್ಟಿನಲ್ಲಿ ಮುಂದುವರೆಯುತ್ತದೆ. ಪಕ್ಷದ ವರಿಷ್ಟರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.

ಯುವ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷರ ಚುನಾವಣಾ ಫಲಿತಾಂಶ ಬಾಕಿ ಇದ್ದು, ಚುನಾವಣಾ ಫಲಿತಾಂಶದ ನಂತರ ಜಿಲ್ಲಾ ಯುವ ಕಾಂಗ್ರೆಸ್‍ನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಮ್ಮುಖದಲ್ಲಿ ನಡೆಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, HC ಯೋಗೇಶ್, ಸಂತೆ ಕಡೂರು ವಿಜಯ್ ಕುಮಾರ್, ಶಿವಾನಂದ್, ಆದರ್ಶ  ಹುಂಚದ ಕಟ್ಟೆ, ಚೇತನ್, ಮಧುಸೂದನ್, ಎನ್ ಎಸ್ ಯು ಐ ಅಧ್ಯಕ್ಷ ವಿಜಯ್, ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್, ರೇಷ್ಮಾ, ಗಿರೀಶ್, ಹರ್ಷಿತರಾಣಿ, ಅಬ್ದುಲ್ ಸತ್ತಾರ್, ಪ್ರವೀಣ್ ಕುಮಾರ್, ಆಕಾಶ್, ಸಾಕ್ಲಿನ್, ಶಿವೂ ಉಲ್ಮರ್, ಮಂಜು ನಾಯಕ್ ಹಾಗೂ ಉಪಸ್ಥಿತರು ಇದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close