ರಾಹುಲ್ ಗಾಂಧಿ ಅವರು ಹಿಡಿದುಕೊಂಡು ಓಡಾಡುತ್ತಿರುವ ಸಂವಿಧಾನದಲ್ಲಿ ಇಂದಿರಾ ಗಾಂಧಿಯ ವಿರುದ್ಧ ಬರೆಯಲಾಗಿದೆ-ಬಿ.ಎಲ್ ಸಂತೋಷ್

Rahul Gandhi has not read the constitution. BJP National General Secretary BL Santosh said that he has no commitment to study.


ಸುದ್ದಿಲೈವ್/ಶಿವಮೊಗ್ಗ

ರಾಹುಲ್ ಗಾಂಧಿ ಎಂದೂ ಸಂವಿಧಾನವನ್ನು ಓದಿಯೇ ಇಲ್ಲ. ಅವರಿಗೆ ಓದುವ ಬದ್ಧತೆ ಕೂಡ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ತಿಳಿಸಿದರು. 

ಅವರು ಅಂಬೇಡ್ಕರ್ ಭವನದಲ್ಲಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. 

ರಾಹುಲ್ ಗಾಂಧಿ ಅವರು ಹಿಡಿದುಕೊಂಡು ಓಡಾಡುತ್ತಿರುವ ಸಂವಿಧಾನದಲ್ಲಿ ಇಂದಿರಾ ಗಾಂಧಿಯ ವಿರುದ್ಧ ಬರೆಯಲಾಗಿದೆ. ಆ ಸಂವಿಧಾನದ ಚಿಕ್ಕ ಪುಸ್ತಕವನ್ನು ಎಡಗೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಅವರು ಪುಸ್ತಕವನ್ನು ಇದುವರೆಗೂ ಓದಿಲ್ಲ ಅನಿಸುತ್ತದೆ ಎಂದರು. 

ಯಾಕೆಂದರೆ ಅವರ ಅಜ್ಜಿಯ ವಿರುದ್ಧ ಬರೆದಿರುವ ಪುಸ್ತಕವನ್ನು ಅವರು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಸಂವಿಧಾನವನ್ನು ಬಿಜೆಪಿ ತಿದ್ದುಪಡಿ ಮಾಡ್ತಾರೆ ಬದಲಾವಣೆ ಮಾಡುತ್ತಿದೆ ಎಂದು ನಗರ ನಕ್ಸಲರು ಮಾತನಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಲು ಪ್ರಯತ್ನ ಪಟ್ಟ ಕಾಂಗ್ರೆಸ್ ಈಗ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಿದೆ ಎಂದು ದೂರಿದರು.‌

ನಕಲಿ ಗಾಂಧಿ ಕುಟುಂಬ ಕುಟುಂಬದವರು ತಮಗೆ ಎದುರಾಳಿಯಾದ ಅಂಬೇಡ್ಕರ್ ಅವರನ್ನು ರಾಜೀನಾಮೆ ಕೊಡುವಂತೆ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದು ರಾಜೀನಾಮೆ ಕೊಟ್ರು. ಕಾಂಗ್ರೆಸಿನವರು ಕೇವಲ ಮುಸ್ಲಿಂ ಅವರ ಪರವಾಗಿ ಮಾತನಾಡುತ್ತಾರೆ ಹಿಂದೂಗಳ ಪರ ಮಾತನಾಡುವುದಿಲ್ಲ ಎಂದು ರಾಜೀನಾಮೆ ನೀಡಿದರು ಎಂದರು. 

ನೆಹರು ಅವರು ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಭೆಗೆ ಸದಸ್ಯರಾಗಲು ಅಡ್ಡಿಪಡಿಸಿದ್ದರು ಹಾಗೆ ಮಂತ್ರಿಯಾಗೋದಕ್ಕೆ ಆಡ್ಡಿಪಡಿಸಿದರು. ದೂರದೃಷ್ಟವೆಂದರೆ ಅಂಬೇಡ್ಕರ್ ಅವರ ಕೊನೆಯ ದಿನದಲ್ಲಿ ಅವರ ಸಮಾಧಿ ಮಾಡಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ. ದೆಹಲಿಯಲ್ಲಿ ಅಂಬೇಡ್ಕರ್ ಅವರ ಒಂದು ಸ್ಮಾರಕವನ್ನು ಕೂಡ ಕಾಂಗ್ರೆಸ್ ಮಾಡಲು ಬಿಡಲಿಲ್ಲ ಎಂದರು. 

ನೆಹರು ತಾನೇ ಇರುವ ಸಮಿತಿಯಲ್ಲಿ ತಮಗೆ ತಾವೇ ಭಾರತ ರತ್ನವನ್ನು ಕೊಟ್ಕೊಂಡ್ರು ಇದು ನಾಚಿಕೆಗೇಡಿನ ಸಂಗತಿಯಾಗಿದೆ. ವಿಪಿ ಸಿಂಗ್ ಸಮ್ಮಿಶ್ರ ಸರ್ಕಾರದಲ್ಲಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಾಯಿತು. ಕಾಂಗ್ರೆಸ್‌ ನ ಮುಖಂಡರು ತಮ್ಮ ಸ್ಮಾರಕವನ್ನ ಬದುಕಿರುವಾಗಲೇ ಮಾಡಿಕೊಳ್ಳುತ್ತಾರೆ. ಇಂದಿರಾಗಾಂಧಿ ಅವರು ಎಮರ್ಜೆನ್ಸಿ ವೇಳೆಯಲ್ಲಿ ಮೇಲೆ ಪ್ರಶ್ನಿಸುವ ಹಕ್ಕನ್ನೆ ಸಂವಿಧಾನದಿಂದ ತೆಗೆದಿದ್ದರು. 

ಇಂದಿರಾ ಗಾಂಧಿ ಅವರು ಒಂದೇ ದಿನ 11 ಸರ್ಕಾರವನ್ನು ರಾಜ್ಯ ಸರ್ಕಾರವನ್ನು ತೆಗೆದುಹಾಕಿದ್ದಾರೆ. ಆದರೆ ಈಗ ನಮಗೆ ಹೇಳುತ್ತಾರೆ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದ್ದಾರೆ ಎಂದು ಆದರೆ ನರೇಂದ್ರ ಮೋದಿ ಅವರು ಹೇಸಿಗೆ ತಿನ್ನುವ ಕೆಲಸ ಎಂದೂ ಮಾಡಿಲ್ಲ. ಮನಮೋಹನ್ ಸಿಂಗ್ ಕಾಲದಲ್ಲಿ ಸಂವಿಧಾನ ಹರಿದು ಹಾಕಿದ ವ್ಯಕ್ತಿ ಈಗ ಸಂವಿಧಾನ ಹಿಡಿದು ಕೊಂಡು ಇಡೀ ದೇಶ ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.‌

ಸಂವಿಧಾನಕ್ಕಿಂತ ಸಂಸತ್ ದೊಡ್ಡದು ಎಂದು ಅಮೆಂಡ್ಮೆಂಟ್ ತಂದವರು ಇಂದಿರಾ ಗಾಂಧಿ ಅವರು ತಿಂದಿದ್ದು ಇಂದಿರಾ ಗಾಂಧಿ ಒರಸಿದ್ದು ಮಾತ್ರ ಸ್ಪೀಕರ್ ಹಾಗೂ ರಾಷ್ಟ್ರಪತಿಯ ಬಾಯಿಗೆ ನಾವು ಸಮಾಜವಾದ ಎಂದು ಸಂವಿಧಾನದಲ್ಲಿ ಸೇರಿಸಿದ್ದೇವೆ ಆದರೆ ಪ್ರಪಂಚದಲ್ಲಿ ಎಲ್ಲೂ ಕೂಡ ಸಮಾಜವಾದ ಈಗ ಸದ್ಯದ ಮಟ್ಟಿಗೆ ಇಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close