ಅಕ್ರಮ ಕಸಾಯಿ ಖಾನೆಯ ಮೇಲೆ ಪೊಲೀಸ್ ದಾಳಿ


An illegal beef butcher shop in Goudarahalli, Bhadravati taluk was raided. 27 kg 960 g of beef was found in the raid. Two laborers who were there to slaughter beef have been taken into custody. A complaint has been filed against three.

ಸುದ್ದಿಲೈವ್/ಭದ್ರಾವತಿ

ಭದ್ರಾವತಿ ತಾಲೂಕು ಗೌಡರಹಳ್ಳಿಯ ಅಕ್ರಮ ಗೋಮಾಂಸದ ಕಸಾಯಿ ಖಾನೆ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ 27 ಕೆಜಿ 960 ಗ್ರಾಂ ಗೋಮಾಂಸ ಪತ್ತೆಯಾಗಿದೆ. ಇಬ್ಬರು ಗೋಮಾಂಸ ಕಡಿಯಲು ಇದ್ದ ಕೂಲಿ ಕಾರ್ಮಿಕರನ್ನ ವಶಕ್ಕೆ ಪಡೆಯಲಾಗಿದೆ. ಮೂರವ ವಿರುದ್ಧ ದೂರು ದಾಖಲಾಗಿದೆ. 

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗೌಡರ ಹಳ್ಳಿಯಲ್ಲಿ ಅನ್ವರ್ ಕಾಲೋನಿಯ ಚಾಂದ್ ಪಾಷ ಎಂಬಾತನ ಕಡೆಯ ಕೂಲಿ ಕಾರ್ಮಿಕರು ರಫಿಕ್ ಸಾಬ್ ನವರ ಮನೆಯ ರಸ್ತೆಯಲ್ಲಿರುವ ಕೊಠಡಿಯಲ್ಲಿ ಗೋಮಾಂಸ ಕತ್ತರಿಸುತ್ತಿದ್ದು ಪೊಲೀಸರು ದಾಳಿ ನಡೆಸಿ ಕೂಲಿ ಕಾರ್ಮಿಕರನ್ನ ವಶಕ್ಕೆ ಪಡೆದಿದ್ದಾರೆ. 

ದಾಳಿಯಲ್ಲಿ 27 ಕೆಜಿ 960 ಗ್ರಾಂ ಗೋಮಾಂಸ ಪತ್ತೆಯಾಗಿದೆ. ಜಾಫರ್ ಮತ್ತು ಸಾದಿಕ್ ಪಾಶ ಎಂಬುವರನ್ನ ವಶಕ್ಕೆ ಪಡೆಯಲಾಗಿದೆ. ಗೋಮಾಂಸವನ್ನ ಮಾರಾಟ ಮಾಡಿ ಬಂದ ಹಣವನ್ನ ವಶಕ್ಕೆ ಪಡೆದುಕೊಂಡು ಮೂವರ ವಿರುದ್ಧ ದೂರು ದಾಖಲಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close