ಎಲ್ಲವೂ ಸರಿಹೋಗಲಿದೆ-ಕೋಟಾ ಶ್ರೀನಿವಾಸ ಪೂಜಾರಿ

An opposition party is being organized in the BJP. There is a slight difference in organization. MP Kota Srinivas Pujari expressed the opinion that everything will be fixed in the future.

ಸುದ್ದಿಲೈವ್/ಶಿವಮೊಗ್ಗ

ಒಂದು ಪ್ರತಿ‌ಪಕ್ಷವಾಗಿ ಬಿಜೆಪಿಯಲ್ಲಿ ಸಂಘಟನೆ ಮಾಡಲಾಗುತ್ತಿದೆ. ಸಂಘಟನೆಯಲ್ಲಿ ಸ್ಬಲ್ಪ ವೈತ್ಯಾಸವಾಗಿದೆ. ಮುಂದೆ ಎಲ್ಲಾವನ್ನು ಸರಿ ಮಾಡಿಕೊಂಡು ಹೋಗಲಾಗುತ್ತದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅಭಿಪ್ರಾಯವನಗನ ವ್ಯಕ್ತಪಡಿಸಿದರು. 

ಮಳೆ ಬರುವ ಮೊದಲು ಗುಡುಗು ಸಿಡಿಲು ಬರುತ್ತದೆ. ಅದೇ ರೀತಿ ಮುಂದೆ ಎಲ್ಲಾ ಸರಿ ಹೋಗುತ್ತದೆ. ಕಾಂಗ್ರೆಸ್ ಆಡಳಿತದಲ್ಲಿ ವಿಫಲರಾಗಿದ್ದಾರೆ. ಬಡವರು ನೆಮ್ಮದಿ‌ ಇದ್ದರೆಂದು ಸಿಎಂ ಹೇಳುತ್ತಿದ್ದಾರೆ. ಅದರೆ ಮಂಡ್ಯದಲ್ಲಿ ಜನ ಗುಳೆ  ಹೋಗುತ್ತಿದ್ದಾರೆ. 12 ಲಕ್ಷ ಪಡಿತರ ರದ್ದಾಗಿದೆ. ಇದರಿಂದ ಬಡವರು ತೂಂಂದ್ರೆಗೆ ಒಳಗಾಗುತ್ತಿದ್ದಾರೆ ಎಂದು ದೂರಿದರು. 

ಪ್ರತಿ ಪಕ್ಷವಾಗಿ ಸಂಘಟನೆ ಬಲಪಡಿಸಬೇಕಾಗಿತ್ತು. ಮುಂದೆ ಸಂಘಟನೆ ಸರಿಪಡಿಸಿಕೊಂಡು ಮುಂದೆ ಹೋಗುತ್ತೆವೆ. ನಮ್ಮ ಸಂಘಟನೆಯ ಎಲ್ಲಾ ಮೂರ್ಚಾ ಬಲಪಡಿಸಿಕೊಂಡು ಹೋಗುತ್ತೆವೆ. ಸಂಘಟನೆಯನ್ನು ಹುಲಿಗೆ ಹೋಲಿಸಿದ ಅವರು ಹುಲಿ ಒಂದು ಹೆಜ್ಜೆ ಹಿಂದೆ ಹಾಕಿದೆ ಅಂದ್ರೆ ಅದು ರಭಸವಾಗಿ ಮುಂದೆ ಬರುತ್ತದೆ ಎಂದು. ಇದರಿಂದ ಯಾರು ಸಹ ಅಸಮರ್ಥರಿಲ್ಲ ಎಂದರು. 

ಕೇಂದ್ರ ಸರ್ಕಾರದ ಜನಪರ ಯೋಜನೆಗೆ ತಡೆಯನ್ನು ರಾಜ್ಯ ಸರ್ಕಾರ ತಡೆಯೊಡ್ಡುತ್ತಿದೆ. ಕೇಂದ್ರ ನಾಯಕತ್ವದ ಅಂಗಳದಲ್ಲಿ ರಾಜ್ಯ ನಾಯಕರ ಚಂಡಿದೆ. ಎಲ್ಲಾರನ್ನು  ಕರೆದು ಸುಮ್ಮನಾಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close