ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 2019 ರಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಎಸ್ ಡಿಎ ಮತ್ತು ಎಫ್ ಡಿಎ ಪರೀಕ್ಷೆಯಲ್ಲಿ ಶಿವಮೊಗ್ಗದ ಇಕ್ಲಾಸ್ ಶಾಲೆಗೆ ಬರೆಯಲು ಬಂದ ಅಭ್ಯರ್ಥಿಯಿಂದ ಅಕ್ರಮ ಪರೀಕ್ಷೆ ಬರೆಯಲಾಗಿದೆ ಎಂದು ಸಿಐಡಿ ಎಫ್ಐಯು ವಿಂಗ್ ನ ಪೊಲೀಸ್ ಇನ್ ಸ್ಪೆಕ್ಟರ್ ಎಫ್ಐಆರ್ ದಾಖಲಿಸಿದ್ದಾರೆ.
ವಿನಯ ಪಾಟೀಲ್ ಯಾನೆ ವಿನಯ್ ಗೌಡ ವಾಸ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೋಣನಕೊಪ್ಪದ ನಿವಾಸಿ ಶಿವಮೊಗ್ಗದ ಇಕ್ಲಾಸ್ ಶಾಲೆಯಲ್ಲಿ ಕೆಪಿಎಸ್ ಸಿ ಪರೀಕ್ಷಾ ಕೇಂದ್ರವಾಗಿ ನಿಗದಿಪಡಿಸಲಾಗಿತ್ತು. ಪರೀಕ್ಷೆಯ ವೇಳೆ ಮೈಕ್ರೋಫೋನ್ ಮತ್ತು ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಆಯೋಗಕ್ಕೆ ವಂಚಿಸಿದ ಪ್ರಕರಣ ಸಿಐಡಿ ಪೊಲೀಸರಿಂದ ಬಹಿರಂಗ ಗೊಂಡಿದೆ.
ಈತನಿಗೆ ಸಹಾಯ ಮಾಡಿದ ಅನಿಲ್, ಮಾರತಿ ಪುರಲೆ, ಶಿವಲಿಂಗ ಪಾಟೀಲ್, ಲಕ್ಷ್ಮಣ್ ಬಂಡಿ, ಸಿದ್ದಲಿಂಗ ಪಾಟೀಲ್ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ. ಇವರೆಲ್ಲಾ ಕೋಚಿಂಗ್ ಸೆಂಟರ್ ನಲ್ಲಿ ಪರಿಚಯವಾಗಿ ಹಣಕ್ಕೆ ಡಿವೈಸ್ ಗಳನ್ನ ನೀಡಿ ಪರೀಕ್ಷೆ ಬರೆಯಿಸಿರುವುದಾಗಿ ಸಿಐಡಿ ದೂರಿನಲ್ಲಿ ದಾಖಲಾಗಿದೆ.
ರಾಣೇಬೆನ್ನೂರಿನ RTES ಶಾಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ 2019 ರಲ್ಲಿ ಎಸ್ ಡಿಎ ಮತ್ತು ಎಫ್ ಡಿಎ ಪರೀಕ್ಷೆ ಬರೆದಾಗ ಅಶ್ವಿನಿ ಎಂಬ ಅಭ್ಯರ್ಥಿನಿ ಡಿವೈಸ್ ಬಳಸಿ ಪರೀಕ್ಷೆ ಬರೆದಿರುವ ಬಗ್ಗೆ ಆ ಕಾಲೇಜಿನ ಪ್ರಾಂಶುಪಾಲರೆ ದೂರು ದಾಖಲಿಸಿದ್ದರು. ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ತನಿಖಾ ವರದಿಯಲ್ಲಿ ಮತ್ತೋರ್ವ ಅಭ್ಯರ್ಥಿ ಶಿವಮೊಗ್ಗಕ್ಕೆ ಬಂದು ಡಿವೈಸ್ ಬಳಸಿ ಪರೀಕ್ಷೆ ಬರೆದಿರುವ ಬಗ್ಗೆ ಸಿಐಡಿ ದೂರಿನಲ್ಲಿ ಉಲ್ಲೇಖಿಸಿದೆ.
ಗೋಕಾಕ್ ನ ಏಕಲವ್ಯ ಮತ್ತು ದಾರಿದೀಪ ಕೋಚಿಂಗ್ ಸೆಂಟರ್ ನಲ್ಲಿ ಶಿವಲಿಂಗ ಪಾಟಿಲ್, ಲಕ್ಷ್ಮ ಣ್ ಬಂಡಿ, ಮಾರುತಿ ಪುರಲೆ, ಅಪ್ಪಯ್ಯ ಮೂಷಕ ನಾಯಕ ಇವರುಗಳು ವಿಷಯವಾರು ಕೋಚಿಂಗ್ ನಡೆಸುತ್ತಿದ್ದರು. ಇವರೆಲ್ಲ ಹಣ ಹೆಚ್ಚಿಗೆ ಸಂಪಾದಿಸುವ ದೃಷ್ಠಿಯಿಂದ ತಮ್ಮಕೋಚಿಂಗ್ ಸೆಂಟರ್ ನಲ್ಲಿಯೇ ಎಸ್ ಡಿಎ ಮತ್ತು ಎಫ್ ಡಿಎ ಪರೀಕ್ಷೆ ಬರೆಯುವರನ್ನಪತ್ತೆ ಮಾಡಿ ಹಣ ಹೆಚ್ಚಿಗೆ ಕೊಟ್ಟರೆ ಪಾಸ್ ಮಾಡಿಸುವುದಾಗಿ ಭರವಸೆ ನೀಡಿ ಆಕಾಂಕ್ಷಿಗಳಿಂದ ಹಣ ಪಡೆದು ಅಕ್ರಮ ಪರೀಕ್ಷೆ ಬರೆಸಿರುತ್ತಾರೆ ಎಂದು ಸಿಐಡಿ ತಿಳಿಸಿದೆ. ಇದರಲ್ಲಿ ಪೊಲೀಸ್ ರೊಬ್ಬರೂ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.