ಬಂಡಾಯ ಹಟಾವೋ ಬಿಜೆಪಿ ಬಚಾವೋ ಆಂದೋಲನ: ಸಂತೋಷ್ ಬಳ್ಳೆಕೆರೆ ಎಚ್ಚರಿಕೆ


BJP loyal workers have lashed out against BJP Rebell leaders. It has been announced that the Bandaya Hathao BJP Bajao movement has been launched under the leadership of ex-syndicate member Ballakere Santhosh.

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ರೆಬೆಲ್ಸ್ ನಾಯಕರ ವಿರುದ್ದ ಬಿಜೆಪಿ ನಿಷ್ಟಾವಂತ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಮಾಜಿ ಸಿಂಡಿಕೇಟ್ ಸದಸ್ಯ ಬಳ್ಳಕೆರೆ ಸಂತೋಷ್ ನೇತೃತ್ವದಲ್ಲಿ ಬಂಡಾಯ ಹಠಾವೋ ಬಿಜೆಪಿ ಬಜಾವೋ ಆಂದೋಲನ ನಡೆಸುವುದಾಗಿ ಎಚ್ಚರಿಸಲಾಗಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಬಳ್ಳೆರೆ ಸಂತೋಷ್ ಬಿಜೆಪಿ ಬಂಡಾಯ ನಾಯಕರ ಹೇಳಿಕೆ ಕಾರ್ಯಕರ್ತರಿಗೆ ಅತ್ಯಂತ ನಿರಾಶೆ ಮೂಡಿಸಿದ್ದು, ಪಕ್ಷದ ಕೆಲಸ ಮಾಡಲಾಗುತ್ತಿಲ್ಲ, ಸಂಘಟನೆಗೆ ಹಿನ್ನಡೆಯಾಗಿದೆ. ನಾಯಕರಲ್ಲಿ ಒಮ್ಮತ ಮೂಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಇಂದು ಬಂಡಾಯ ಹಟಾವೋ ಬಿಜೆಪಿ ಬಚಾವೋ ಎಂದು ಆಗ್ರಹಿಸಿದ್ದಾರೆ.

ಯತ್ನಾಳ್ ಮತ್ತು ಟೀಮ್ ಪಕ್ಷದ ಹೈಕಮಾಂಡ್‌ಗೆ ಅವಮಾನಿಸಿದೆ. ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿಯ ಹೈಕಮಾಂಡ್ ರಾಜ್ಯಾಧ್ಯಕ್ಷರಾಗಿ ಘೋಷಿಸಿದ ಮೇಲೆ ಪಕ್ಷದ ಆದೇಶಕ್ಕೆ ತಲೆಬಾಗಿ ಒಗ್ಗಟ್ಟಿನಲ್ಲಿ ಪಕ್ಷವನ್ನು ಮುನ್ನಡೆಸಬೇಕಾದ ಕೆಲವೇ ಕೆಲವು ಬಂಡಾಯ ನಾಯಕರು ಹೈಕಮಾಂಡ್ ಆದೇಶವನ್ನು ಉಲ್ಲಂಘಿಸಿ ಮುಜುಗರ ತರವಂತಹ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕಾರ್ಯಕರ್ತರ ತಾಳ್ಮೆ ಮೀರಿ ಹೋಗಿದೆ. ಇದಕ್ಕೆ ಇತಿಶ್ರೀ ಹಾಡಲು ಕಾರ್ಯಕರ್ತರೆಲ್ಲರು ಸೇರಿ ಯತ್ನಾಳ್ & ಟೀಂಗೆ ಕೂಡಲೇ ನಿಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಿ ಇಲ್ಲವಾದರೆ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಿಮ್ಮ ವಿರುದ್ಧ ಆಂಧೋಲನ ಹಮ್ಮಿಕೊಳ್ಳುತ್ತೇವೆ. ಸಹಿ ಚಳುವಳಿ ಮುಖಾಂತರ ಪಕ್ಷದ ರಾಷ್ಟಿçÃಯ ಅಧ್ಯಕ್ಷರಿಗೆ ನಿಮ್ಮ ವಿರುದ್ಧ ದೂರು ಸಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.


ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸತ್ತು ಹೋಗಿದೆ. ಗ್ಯಾರಂಟಿಗಳಿಗೆ ಹಣವಿಲ್ಲದೆ ಪರದಾಡುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ. ಈ ಸಂದರ್ಭದಲ್ಲಿ ಪಕ್ಷದ ನಾಯಕರು ಒಗ್ಗಟ್ಟಾಗಿ ಪ್ರತಿಭಟನೆ ಮಾಡಿ ಪಕ್ಷ ಸಂಘಟನೆ ಮಾಡಬೇಕಿತ್ತು. ಅಧ್ಯಕ್ಷರಾದ ವಿಜಯೇಂದ್ರ ಅವರು, ಕಾಂಗ್ರೆಸ್ಸಿನ ದುರಾಡಳಿತದ ವಿರುದ್ಧ ರಾಜ್ಯಾದಾದ್ಯಂತ ಪಾದಯಾತ್ರೆ ಮಾಡಿದ್ದರು. ಅನೇಕ ಹೋರಾಟ ಮಾಡಿ, ಪಕ್ಷ ಸಂಘಟಿಸಿದರು. ಆಗ ಈ ನಾಯಕರು ಯಾರೂ ಸಾತ್ ನೀಡಿಲ್ಲ. ಇನ್ನೂ ವಿಜಯೇಂದ್ರ ಮತ್ತು ಬಿ.ಎಸ್.ವೈ. ವಿರುದ್ಧ ಟೀಕೆಗಳನ್ನು ಕಾರ್ಯಕರ್ತರು ಸಹಿಸಲ್ಲ. ಶಿವಮೊಗ್ಗದಿಂದಲೇ ಭಿನ್ನಮತಿಯ ಬಂಡಾಯ ನಾಯಕರಿಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದು, ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು. ಇಲ್ಲದಿದ್ದಲ್ಲಿ ಕಾರ್ಯಕರ್ತರು ಸುಮ್ಮನಿರುವುದಿಲ್ಲ ಎಂದರು.

ಮಠಾಧೀಶರ ಬಗ್ಗೆ ಕೂಡ ಪೇಮೆಂಟ್ ಗಿರಾಕಿಗಳು ಎಂದು ಯತ್ನಾಳ್ ಅವಮಾನಿಸಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಾರೆ.  ಕೂಡಲೇ ಅವರು ಮಠಾಧೀಶರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಿರೀಶ್ ಭದ್ರಾಪುರ,  ಸಂತೋಷ್ ಹೊಳಲೂರು, ರಾಜಶೇಖರ್, ಕೆ.ಹರೀಶ್, ಅಜೆಯ್ ಕಾಟೇಕರ್, ಮುರುಳಿ, ಶಾಂತಸುರೇAದ್ರ, ಕಿರಣ್, ನಂದಿನಿ ಶೆಟ್ಟಿ, ರಾಘವೇಂದ್ರ, ಪನ್ನೀರ್ ಸೆಲ್ವಂ ಮತ್ತಿತರರು ಇದ್ದರು.


ಬಿ.ಎಸ್.ಯಡಿಯೂರಪ್ಪ, ೪ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದು, ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಕೂಡ ನಾಲ್ಕು ಬಾರಿ ಗೆದ್ದು ಸಂಸದರಾಗಿ ಅತ್ಯುತ್ತಮ ಕಾರ್ಯ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾವಿರಾರು ಕೋಟಿ ಅನುದಾನ ತಂದಿದ್ದಾರೆ. ಬೇರೆ ಪಕ್ಷಗಳಲ್ಲಿ ಅಪ್ಪ ಮಕ್ಕಳು ರಾಜಕಾರಣ ಮಾಡುತ್ತಿಲ್ಲವೆ? ಯುವಕರು ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರಾಗಿಲ್ಲವೇ? ರಾಜ್ಯಾಧ್ಯಕ್ಷರಾಗಿದ್ದಾಗ ಸುಮ್ಮನಿದ್ದ ಈ ನಾಯಕರು ಈಗ ಈ ರೀತಿಯ ವರ್ತನೆ ತೋರುತ್ತಿರುವುದು ಸರಿಯಲ್ಲ.

- ಸಂತೋಷ್ ಬಳ್ಳೆಕೆರೆ , ಬಿಜೆಪಿ ಮುಖಂಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close