ಮಂಗಳದ ಪ್ರಸಿದ್ಧ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ಇನ್ನಿಲ್ಲ

MB Sivannagowda, a folk doctor and herbalist of Mangala village near Konandur in Shimoga district's Tirthahalli taluk, passed away at his home this morning.


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಜನಪದ ವೈದ್ಯರತ್ನ, ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 

ನಾಲ್ಕೈದು ದಶಕಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿಯಲ್ಲಿ ಪ್ರಚಾರವಿಲ್ಲದೇ ಯಶಸ್ಸು ಕಂಡ ಮಂಗಳದ ಶಿವಣ್ಣ ಗೌಡರು ವಯೋಸಹಜ ಖಾಯಿಲೆಯಿಂದ ಇಂದು ಮುಂಜಾನೆ 4.45 ಕ್ಕೆ ದೈವಾಧೀನರಾಗಿದ್ದಾರೆ. 

ಪಾರಂಪರಿ ನಾಟಿ ಔಷಧಿ ನೀಡುತ್ತಾ ಸಾವಿರಾರು ಜನರ ಬದುಕಿಗೆ ಆಶಾಕಿರಣರಾಗಿದ್ದ ಮಂಗಳದ ಶಿವಣ್ಣ ಗೌಡರು ಮಾಜಿ ಸಚಿವೆ ಮನೋರಮ ಮದ್ವರಾಜ್, ಪತ್ರಕರ್ತೆ ಗೌರಿ ಲಂಕೇಶ್,  ಸಾಹಿತಿಗಳಾದ ಚಂದ್ರಶೇಖರ್ ಕಂಬಾರ್ ಸಚಿವರಾದ ಈಶ್ವರಪ್ಪ ಹಾಗೂ ಹೊರ ರಾಜ್ಯಗಳ ಹಾಗೂ ಹೊರರಾಷ್ಟ್ರದ ಜನರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರು, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿರವರು ಇವರ ಸೇವೆಯನ್ನು ಮೆಚ್ಚಿದ್ದರು. ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನಿಂದ ಗೌಡರಿಗೆ ಜಾನಪದ ವೈದ್ಯರತ್ನ ಪ್ರಶಸ್ತಿ ಪಡೆದಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close