ಕುಡಿದ ಮತ್ತಿನಲ್ಲಿ ನಡೆಯಿತೇ ಮಾರಣಾಂತಿಕ ಹಲ್ಲೆ?

Two persons were fatally attacked due to a commotion in front of Bluemoon Bar and Restaurant near Bhargavi Petrol Station in Shimoga. The condition of both is serious.


ಸುದ್ದಿಲೈವ್-/ಶಿವಮೊಗ್ಗ

ಶಿವಮೊಗ್ಗದ ಭಾರ್ಗವಿ ಪೆಟ್ರೋಲ್ ಬಂಕ್ ಬಳಿ ಇರುವ ಬ್ಲೂಮೂನ್ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಗಲಾಟೆಯಾಗಿದ್ದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. 



ಹೊಸಮನೆ ನಿವಾಸಿಗಳಾದ ಹರೀಶ್(35) ಅವರ ಅಜ್ಜಿ  ತೀರಿಕೊಙಡಿದ್ದರಿಂದ ಅಂತ್ಯಕ್ರಿಯೆ ಮುಗಿಸಿ ಸ್ನೇಹಿತ ಮಂಜು (28) ಜೊತೆಗೆ ಸಾಗರ ರಸ್ತೆಯಲ್ಲಿರುವ  ಬ್ಲೂಮೂನ್ ಗೆ ಮದ್ಯ ಸೇವಿಸಲು  ಬರ್ತಾರೆ. ಕುಡಿದು ಹೊರಗಡೆ ನಿಂತಿದ್ದ ಹರೀಶ್ ಮತ್ತು ಮಂಜು ನಡುವೆ  ಭರ್ಜರಿ ಗಲಾಟೆಯಾಗಿದೆ. 

ಹರೀಶ್ ಮತ್ತು ಮಂಜು ಇಬ್ವರೂ ಕಬ್ಬಿಣದ ರಾಡಿನಲ್ಲಿ ಹೊಡೆದಾಡಿಕೊಂಡಿದ್ದಾರೆ. ಮಂಜು ಮೆಗ್ಗಾನ್ ಮತ್ತು ಹರೀಶ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಸಧ್ಯಕ್ಕೆ ಇಬ್ಬರೂ ಚಿಕಿತ್ಸೆಯಲ್ಲಿದ್ದಾರೆಘಟನೆ ಸಿಸಿ ಟಿವಿ ಫೂಟೇಜ್ ನಲ್ಲಿ ಸೆರೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close