ಸೊರಬದಲ್ಲಿ ಬಿಜೆಪಿ ಸಂಭ್ರಮಾಚಾರಣೆ

BJP taluk unit president Prakash said that the BJP wave is spreading widely in the country and BJP was able to win majority in the Delhi assembly elections due to the hard work of activists.


ಸುದ್ದಿಲೈವ್/ಸೊರಬ

ದೇಶದಲ್ಲಿ ಬಿಜೆಪಿ ಅಲೆ ವ್ಯಾಪಕವಾಗಿ ಬೀಸುತ್ತಿದ್ದು, ಕಾರ್ಯಕರ್ತರ ಶ್ರಮದಿಂದ ದೆಹಲಿ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿ ಬಹುಮತ ಗಳಿಸಲು ಸಾಧ್ಯವಾಯಿತು ಎಂದು ಬಿಜೆಪಿ ತಾಲ್ಲೂಕು ಘಟ ಕದ ಅಧ್ಯಕ್ಷ ಪ್ರಕಾಶ್ ಹೇಳಿದರು.

ಪಟ್ಟಣದ ರಂಗನಾಥ ದೇವಸ್ಥಾನದ ಮುಂಭಾಗದಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು.

ದಶಕಗಳಿಂದ ದೆಹಲಿ ಆಡಳಿತ ಹಿಡಿಯಲು ಹಂಬಲಿ ಸುತ್ತಿದ್ದ ಬಿಜೆಪಿಗೆ ಮತದಾರರು ಬಹು ಮತ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ತಂತ್ರ ಗಾರಿಕೆ ಹಾಗೂ ಕೇಂದ್ರ ಸರ್ಕಾರದ ಜನಪರ ಆಡಳಿತ ಮೆಚ್ಚಿ ಬೆಂಬಲಿಸಿರು ವುದು ಕಾರ್ಯ ಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ತಿಳಿಸಿದರು.

ಮುಖಂಡರಾದ ಪಾಣಿ ರಾಜಪ್ಪ, ಡಿ.ಶಿವಯೋಗಿ, ವಿನಯ್ ಶೆರ್ವಿ, ವೈ.ಜಿ.ಗುರು ಮೂರ್ತಿ, ಅಶಿಕ್, ಯೋಗೇಶ್ ಓಟೂರು, ಜಾನಕಪ್ಪ, ಸಂಜೀವ್ ಆಚಾ‌ರ್, ಮೋಹನ ಹಿರೇಶಕುನ.ಷಡಾಕ್ಷರಿ,ಚಂದ್ರಪ್ಪ ಶಿಗ್ಗದ್, ಕೇಶವ ಪೇಟ್ಕರ್. ಕೇಶವಮೂರ್ತಿ, ಗೌರಮ್ಮ ಭಂಡಾರಿ, ಅರುಣ ಕುಮಾರ್, ಬಸವರಾಜ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close