![]() |
The Bhadravati Old town police arrested the accused in a case of defrauding a 40-year-old woman of Bhadravati taluk of the district by believing that she was going to get married. |
ಸುದ್ದಿಲೈವ್/ಶಿವಮೊಗ್ಗ
ಮದುವೆಯಾಗುವುದಾಗಿ ನಂಬಿಸಿ ಜಿಲ್ಲೆಯ ಭದ್ರಾವತಿ ತಾಲೂಕಿನ 40 ವರ್ಷದ ಮಹಿಳೆಗೆ ಸರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಪ್ರಕರಣವನ್ನ ಬೇಧಿಸಿರುವ ಭದ್ರಾವತಿ ಹಳೆನಗರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಬಿಜಾಪುರ ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದ 40 ವರ್ಷ ವಯಸ್ಸಿನ ಭೀಮರಾಜ್ @ ಜೈಭೀಮ್ ಬಿನ್ ವಿಠಲ ಎಂಬಾತ ಭದ್ರಾವತಿ ನಿವಾಸಿಎಂದು ಮಹಿಳೆ ಒಬ್ವರಿಗೆ ಮಾಟ್ರಿಮೋನಿಯಲ್ ನಲ್ಲಿ ಪರಿಚಯವಾಗಿ ಮದುವೆಯಾಗಿಲ್ಲ ಎಂದು ನಂಬಿಸಿ ಫೊನ್ ಪೇ ಮೂಲಕ 5,43,451 ರೂ, 2 ಲಕ್ಷ ರೂ. ಹಾಗೂ 2,25,000 ಮೌಲ್ಯದ ಚಿನ್ನಾಭರಣಗಳನ್ನ ಪಡೆದು ವಂಚಿಸಿದ್ದನು.
ಈ ಪ್ರಕರಣವನ್ನ ಮಹಿಳೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನ ಬೇಧಿಸಿದ ಪೊಲೀಸರಿಗೆ ಆತನ ಕುಂಡಲಿ ಜಾಲಾಡಿದಾಗ ಅದ್ಭುತ ವಿಷಯಗಳೆ ಹೊರಬಂದಿದೆ. ಭೀಮ್ ರಾಜ್ ಗೆ ಕೊಪ್ಪಳ ಜಿಲ್ಲೆಯ ಎಲ್ಲಾ ಜೈಲುಗಳಲ್ಲೂ ನ್ಯಾಯಾಂಗ ಬಂಧನದಲ್ಲಿದ್ದ ಈತನ ವಿರುದ್ಧ ರಾಜ್ಯದ ವಿವಿಧ 10 ಠಾಣೆಗಳಲ್ಲಿ 12 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.
2024ರ ಸೆಪ್ಟೆಂಬರ್ 27 ರಂದು ಭೀಮರಾಜ್ ಭದ್ರಾವತಿಯ 40 ವರ್ಷ ವಯಸ್ಸಿನ ಮಹಿಳೆಯನ್ನು ಮ್ಯಾಟ್ರಿಮೋನಿ ಅಪ್ಲಿಕೇಷನ್ನಿನಲ್ಲಿ ಪರಿಚಯ ಮಾಡಿಕೊಂಡಿದ್ದ. ಈಗಾಗಲೇ ಮದುವೆಯಾಗಿರುವುದನ್ನು ಮರೆಮಾಚಿ ಮಹಿಳೆಯನ್ನು ಮದುವೆಯಾಗಿ ನಂಬಿಸಿ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ. ಅವರ ಚಿಕಿತ್ಸೆಗೆ ಹಣ ಬೇಕೆಂದು ಹೇಳಿ ಫೋನ್ ಪೇ ಮೂಲಕ ಒಟ್ಟು 5,43,451 ರೂ.,ಗಳನ್ನು ಮತ್ತು 2 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಪಡೆದುಕೊಂಡಿದ್ದ. ಅಲ್ಲದೇ, ಕಚೇರಿಗೆ ಬೇಕೆಂದು 2.25 ಲಕ್ಷ ರೂ.ಗಳ ಮೌಲ್ಯದ 30 ಗ್ರಾಂ ತೂಕದ ಚಿನ್ನದಾಭರಣಗಳನ್ನು ಪಡೆದು ಮೋಸ ಮಾಡಿದ್ದ.
ಭೀಮರಾಜ್ @ ಜೈಭೀಮ್ ವಿರುದ್ಧ ವಿಜಯಪುರ ತಾಲೂಕಿನ ತಿಕೋಟ, ಬಾಗಲಕೋಟೆ ನಗರದ ಬಬಲೇಶ್ವರ, ದೊಡ್ಡ ಬಳ್ಳಾಪುರ ಗ್ರಾಮೀಣದಲ್ಲಿ, ಶಿವಮೊಗ್ಗದ ಹೊಸನಗರ, ಬೆಂಗಳೂರು ನಗರದ ಸೌಥ್ ಈಸ್ಟ್ ಸಿಇಎನ್, ಹೊರ್ತಿ, ಮುದ್ದೇಬಿಹಾಳ ಮತ್ತು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗಳಲ್ಲೂ ಒಟ್ಟು 12 ಪ್ರಕರಣಗಳು ದಾಖಲಾಗಿದ್ದವು.