ಸುದ್ದಿಲೈವ್/ಶಿವಮೊಗ್ಗ
ಆತ ಕಂಡಿದ್ದು ಅಂತಿಂಥ ಕನಸಲ್ಲ, ಇಡೀ ದೇಶವನ್ನೇ ವಾಯು ಮಾರ್ಗದಲ್ಲಿ(Air root) ರಕ್ಷಣೆ ಮಾಡುವ ಕೆಲಸ. ಮಲೆನಾಡಿನಲ್ಲಿ ಹುಟ್ಟಿ ದೂರದ ಊರಲ್ಲಿ ದೇಶ(country) ಕಾಯುವ ಕೆಲಸ ಮಾಡುತ್ತಿದ್ದ. ಹಲವು ಯುವಕರಿಗೂ ಕೂಡ ಆತ ರೋಲ್ ಮಾಡೆಲ್ ಕೂಡ ಹೌದು! ಆದರೆ ವಿಧಿ ಆಟವೇ ಬೇರೆ ಇತ್ತು. ವೀರಯೋಧ ಈಗ ವೀರ ಮರಣ ಹೊಂದಿ ಈಗ ಪಂಚಭೂತಗಳಲ್ಲಿ ಲೀನನಾಗಿದ್ದಾನೆ... ಆತನ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದೆ.
ಊರ ಮಗನನ್ನು ಕಳೆದುಕೊಂಡು ಸಂಕೂರು ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ವಾಯುಸೇನೆ ಅಧಿಕಾರಿ ಜಿ.ಎಸ್.ಮಂಜುನಾಥ್ ಅಕಾಲಿಕ ಸಾವು, ಇಡೀ ಹೊಸನಗರ ತಾಲೂಕಿನ ಸಂಕೂರು ಗ್ರಾಮ ಮೌನಕ್ಕೆ ದೂಡಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ತರಬೇತಿ ವೇಳೆ ಪ್ಯಾರಚೂಟ್ ತೆರೆಯದೆ ಆಗಸದಿಂದ ಬಿದ್ದು ವಾಯುಸೇನೆ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಶುಕ್ರವಾರ ನಿಧನರಾಗಿದ್ದಾರೆ.
ಅವರ ಪಾರ್ಥೀವ ಶರೀರ ಈಗ ಹುಟ್ಟೂರು ಸಂಕೂರು ಗ್ರಾಮಕ್ಕೆ ತರಲಾಗುತ್ತಿದ್ದು ಗ್ರಾಮಸ್ಥರು ಗ್ರಾಮದಲ್ಲಿ ಅಂತಿಮ ನಮನ ಸಲ್ಲಿಸಿದರು. ಜಿ.ಎಸ್.ಮಂಜುನಾಥ್ ಅವರಿಗೆ ಗೌರವ ಸಲ್ಲಿಸಲು ದೂರದ ಊರಿನಿಂದ ಸ್ಥಳೀಯರು ಆಗಮಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.ಇತ್ತ ಕಲ್ಪಿತಾ ತನ್ನ ಗಂಡನ ಮೃತದೇಹ ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹೊಸನಗರ ತಾಲೂಕಿನ ಸಂಕೂರು ಗ್ರಾಮದಲ್ಲಿ ವಾಯುಸೇನೆ ಅಧಿಕಾರಿ ಜಿ.ಎಸ್.ಮಂಜುನಾಥ್ ಪಾರ್ಥಿವ ಶರೀರದ ಬಾಕ್ಸ್ ಓಪನ್ ಆಗುತ್ತಿದ್ದಂತೆ ಮಂಜುನಾಥ್ ಪತ್ನಿ ಕಲ್ಪಿತಾ, ತಾಯಿ ನಾಗರತ್ನ ತಂದೆ ಸುರೇಶ್, ತಮ್ಮ ಯುವರಾಜ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮುಖ ನೋಡುತ್ತಿದ್ದಂತೆ ಮಂಜುನಾಥ್ ಮುಖಕ್ಕೆ ಪತ್ನಿ ಕಲ್ಪಿತಾ ಮುತ್ತು ಕೊಟ್ಟು ಅಂತಿಮ ಕಣ್ಣೀರಿನ ವಿದಾಯ ಹೇಳಿದರು.
ಇನ್ನು ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ಪ್ಯಾರಾಚೂಟ್ ಮುಖಸ್ಥನಾಗಿ ಸೇವೆ ಸಲ್ಲಿಸಿದವರು ಮಂಜುನಾಥ್ ಆಕಸ್ಮಿಕ ವಾಗಿ ಸಾವನಪ್ಪಿರುವುದು ತಾಲೂಕಿಗೆ ತುಂಬಾ ಅನ್ಯಾಯ ವಾಗಿದ್ದು ಅವರ ಸಾವಿನ ಬಗ್ಗೆ ರಕ್ಷಣಾ ಸಚಿವರು ತನಿಖೆ ಮಾಡಬೇಕೆಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಸಂಕೂರು ಗ್ರಾಮದಲ್ಲಿ ಮಾತನಾಡಿದ ಅವರು ಪ್ಯಾರಾಚೂಟ್
ಸಮಗ್ರ ತನಿಖೆಗೆ ಮನವಿ
ಹನ್ನೆರಡು ಜನ ವಿಮಾನದಿಂದ ಹಾರಿದ್ದಾರೆ. ಹನ್ನೊಂದು ಜನಕ್ಕೆ ಮಂಜುನಾಥ್ ಅವರು ತರಬೇತಿ ನೀಡುತ್ತಿದ್ದರು. ಆ ಹನ್ನೊಂದು ಮಂದಿಯ ಪ್ಯಾರಾಚೂಟ್ ತೆರೆದುಕೊಂಡು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಇವರು ಪ್ಯಾರಾಚೂಟ್ ಮಾತ್ರ ತೆರೆದುಕೊಳ್ಳದಿರುವುದು ಅನುಮಾನ ಮೂಡಿಸಿದೆ. ಈ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಕುಟುಂಬ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನ ಮನವಿ ಮಾಡಿಕೊಂಡಿದ್ದಾರೆ..
ಹುಟ್ಟಿನಲ್ಲಿ ಊರ ಹೆಮ್ಮೆಯ ಮಗನನ್ನ ಕಳೆದುಕೊಂಡು ಗ್ರಾಮಸ್ಥರು ಕಣ್ಣೀರಿಟ್ರೆ ಹೆತ್ತ ಮಗ ಹಾಗೂ ಗಂಡನನ್ನ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ವಿದಾಯ ಹೇಳುವಂತಾಗಿದೆ ಸೈನಿಕರಿಗೆ ಕೊನೆಯದಾಗಿ ಹೇಳುವ ಅಮರಹೆ ಮಾತೊಂದೇ ಅಲ್ಲಿ ಉಳಿದಿದೆ