ಸುದ್ದಿಲೈವ್/ಶಿವಮೊಗ್ಗ
ಗಾಂಜಾ ಪ್ರಕರಣದಲ್ಲಿ 6 ಜನ ರೌಡಿ ಶೀಟರ್ ಗಳಿಗೆ ನ್ಯಾಯಾಂಗ ಬಂಧನವಾಗಿದೆ. ಹುಟ್ಟುಹಬ್ಬದ ಆಚರಣೆಯ ವೇಳೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪತ್ತೆಯಾದ ಗಾಂಜ ಪ್ರಕರಣದಲ್ಲಿ ಮಾರ್ಕೆಟ್ ಫೌಜನ್ ಸೇರಿ ಐವರನ್ನ ಪೊಲೀಸರು ಬಂಧಿಸಿದ್ದರು.
ಈಗಾಗಲೇ ಮಾರ್ಕೆಟ್ ಫೌಜನ್ ಈಗಾಗಲೇ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ, ಈತನ ಹುಟ್ಟುಹಬ್ಬವನ್ನ ಮೊನ್ನೆ ರಾತ್ರಿ ಶ್ರೀರಾಮಪುರದ ತೋಟವೊಂದರಲ್ಲಿ ಆಚರಿಸಲಾಗುತ್ತಿತ್ತು. ಈ ವೇಳೆ ಪೊಲೀಸ್ ರೈಡ್ ನಡೆದಿದೆ. ಈ ವೇಳೆ ಅಧಿಕ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿದೆ.
ಗಾಂಜಾ ಪ್ರಕರಣದಲ್ಲಿ ಮಾರ್ಕೆಟ್ ಫೌಜನ್ ಸೇರಿ 6 ಜನ ರೌಡಿ ಶೀಟರ್ ಗಳಿಗೆ ನ್ಯಾಯಾಂಗ ಬಂದನಕ್ಕೆ ಇಂದು ಬಿಡಲಾಗಿದೆ. ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಕೋಟೆ, ತುಂಗನಗರ ಹಾಗೂ ದೊಡ್ಡಪೇಟೆ ಪೊಲೀಸ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 1.2 ಕೆಜಿ ಗಾಂಜಾ ಪತ್ತೆಯಾಗಿತ್ತು.