MP B. Y. Raghavendra opined that this time the budget of the Center has presented a budget in favor of developed India.
ಸುದ್ದಿಲೈವ್/ಶಿವಮೊಗ್ಗ
ಕೇಂದ್ರದ ಈ ಬಾರಿಯ ಬಜೆಟ್ ವಿಕಸಿತ ಭಾರತದ ಪರವಾಗಿರುವ ಬಜೆಟ್ ಮಂಡಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ನಿರ್ಮಲಾ ಸೀತಾರಾಮನ್ ಯಶಸ್ವಿ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ಹಾಗೂ ಬಡ ವರ್ಗವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ನೀಡಿದ್ದಾರೆ. ಜನರಲ್ಲಿ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಈ ಬಜೆಟ್ ಸಹಕಾರಿ ಆಗಿದೆ ಎಂದರು.
ಯುವ ಶಕ್ತಿಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಬಜೆಟ್ ನೆರವಾಗಲಿದೆ. ೩೭ ವರ್ಷದ ನಂತರ ದಿಲ್ಲಿಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದೆ. ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಅನೇಕ ಆಪ್ ಮುಖಂಡರು ಸೋತಿದ್ದಾರೆ. ಕಾಂಗ್ರೆಸ್ ಪಕ್ಷ ೩ ನೇ ಬಾರಿ ಸೋಲು ಕಂಡಿದೆ ಎಂದರು.
ದೇಶದ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಸಂತಸದ ವಿಷಯವಾಗಿದೆ. ಒಳ್ಳೆಯ ಆಡಳಿತ ನೀಡದಿರುವುದೇ ಆಪ್ ಸೋಲಿಗೆ ಕಾರಣವಾಗಿದೆ ಎಂದ ಸಂಸದ ವೈಜಾಕ್ ಸ್ಟೀಲ್ ಬಂಡವಾಳ ಹಿಂತೆಗೆತ ಲಿಸ್ಟ್ ನಲ್ಲಿತ್ತು. ಅದಕ್ಕೆ ಈಗ ಮತ್ತೆ ಬಂಡವಾಳ ಹೂಡಿಕೆ ಆರಂಭವಾಗಿದೆ ಎಂದರು.
ಅದೇ ರೀತಿ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಅಭಿವೃದ್ಧಿ ಕಡೆಗೂ ಗಮನ ಹರಿಸುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯದ ಬಿಜೆಪಿ ಗೊಂದಲದ ಬಗ್ಗೆ ಕೇಂದ್ರ ನಾಯಕತ್ವ ಗಮನ ಹರಿಸಲಿದೆ. ಅದಕ್ಕಾಗಿ ಚಿಕ್ಕಜಾಜೂರು-ಭದ್ರಾವತಿ ನಡುವೆ ರೈಲು ಓಡಾಟಕ್ಕೆ ಕೋರಿದ್ದೇನೆ ಎಂದರು.
ಕಳೆದ ಒಂದು ವರ್ಷದಿಂದ ಪಕ್ಷದಲ್ಲಿ ಸಾಕಷ್ಟು ಗೊಂದಲ ಇದೆ. ದಿಲ್ಲಿ ಚುನಾವಣೆ ಮುಗಿದಿದ್ದು ಇದೀಗ ರಾಜ್ಯದ ಬಿಜೆಪಿ ಬೆಳವಣಿಗೆ ಬಗ್ಗೆ ಹಾಗೂ ಕಮಾಂಡ್ ಗಮನ ಹರಿಸುವ ಸಾಧ್ಯತೆ ಇದೆ. ಭದ್ರಾ ಮೇಲ್ದಂಡೆ ಯೋಜನೆಗೆ ಈ ಸಲ ಹಣ ಸಿಗುವ ಸಾಧ್ಯತೆ ಇದೆ ಎಂದರು.