ಫೆ.10 ಕ್ಕೆ ರೈತ ಸಂಘದಿಂದ ಪ್ರತಿಭಟನೆ

He says that we have done as CM Siddaramaiah said. But they are wrong. Therefore, a protest will be held in front of the DC office on February 10 to condemn the agricultural policy of the state government, said HR Basavarajappa, president of the State Farmers Association.


ಸುದ್ದಿಲೈವ್/ಶಿವಮೊಗ್ಗ

ಸಿಎಂ‌ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರು ಮಾತಿಗೆ ತಪ್ಪಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ಕೃಷಿ ಧೋರಣೆ ಖಂಡಿಸಿ ಫೆ.10 ರಂದು ಡಿಸಿ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಙಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ತಿಳಿಸಿದರು.

ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಈ ಹಿಂದೆ ಚುನಾವಣೆಗೂ‌ ಮುನ್ನಾ ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತ ಸಂಘಟನೆ‌ ವತಿಯಿಂದ ಹೋರಾಟ ನಡೆಸಲಾಗಿತ್ತು. ಆಗ ನಡೆದ ಮಾತುಕತೆಗೆ ಡಿಸಿಎಂ‌ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ‌ ಕಳೆಯುತ್ತಾ ಬಂದರೂ ಬೇಡಿಕೆ ಈಡೇರಿಲ್ಲ ಎಂದು ದೂರಿದರು. 

ರೈತ ಸಂಘದ ಬಹುಮುಖ್ಯ ಬೇಡಿಕೆಯಾದ ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡಿಲ್ಲ. 

ಕೃಷಿ ಕಾಯ್ದೆಗೆ ತಿದ್ದುಪಡಿ, ಪಿಟಿಸಿಎಲ್ ಹಾಗೂ ವಿದ್ಯುಚ್ಛಕ್ತಿ ಕ್ಷೇತ್ರದ ಖಾಸಗೀಕರಣ ಸೇರಿದಂತೆ ಮೂರು ಕಾಯ್ದೆಯನ್ನು ರದ್ದು ಮಾಡಿಲ್ಲ. ಬದಲಿಗೆ ಈ ಕಾಯ್ದೆ ಜಾರಿಯಲ್ಲಿ ಪ್ರಮುಖ‌ ವ್ಯಕ್ತಿಯಾದ ಕೇಂದ್ರ ಸರ್ಕಾರದ ಅಶೋಕ್ ದಳವಾಯಿ ಅವರನ್ನೇ ಮುಂದುವರಿಸಿದೆ ಎಂದು ದೂರಿದರು. 

ಇದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆಯಾಗಿದೆ. ಮೂರೂ ಕಾಯ್ದೆಗಳು ರೈತ ವಿರೋಧಿಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close