Sharada MJ Appaji of Bhadravati posted a video clipping of a news challenge on Facebook page regarding the case of kicking Dalit youths with a shoe, and wrote, "Will justice be done for the violence against Dalit youths?"
ಸುದ್ದಿಲೈವ್/ಶಿವಮೊಗ್ಗ
ದಲಿತ ಯುವಕರಿಗೆ ಬೂಟುಕಾಲಿನಲ್ಲಿ ಒದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ಶಾರದಾ ಎಂಜೆ ಅಪ್ಪಾಜಿ ಫೇಸ್ ಬುಕ್ ಪೇಜ್ ನಲ್ಲಿ ಝಣಝಣ ಕಾಂಚಾಣ, ದಲಿತ ಯುವಕರ ಮೇಲಿನ ದೌರ್ಜನ್ಯಕ್ಕೆ ನ್ಯಾಯ ಸಿಗುವುದೇ ಎಂದು ಬರೆದು ನ್ಯೂಸ್ ಚಾಲೆನ್ ನ ವಿಡಿಯೋ ಕ್ಲಿಪಿಂಗ್ ನ್ನ ಹರಿ ಬಿಟ್ಟಿದ್ದಾರೆ.
ರಿಪಬ್ಲಿಕ್ ಆಫ್ ಭದ್ರಾವತಿಯಲ್ಲಿ ರಿಪಬ್ಲಿಕ್ ಆಫ್ ಪೊಲೀಸ್ ವ್ಯವಸ್ಥೆ ಎಂದು ಉಲ್ಲೇಖಿಸಿರುವ ಅವರು, ಭದ್ರಾವತಿ ಅಧಿಕಾರಿಗಳು ತಪ್ಪು ಮಾಡಿದರು ಸಹ ಅವರುಗಳ ಮೇಲೆ ಕಾನೂನು ಕ್ರಮ ಜರುಗಲ್ಲ ಎಂದು ಬರೆದಿದ್ದಾರೆ.
ಬೂಟು ಕಾಲಿನಲ್ಲಿ ಹೊಡೆಯುವ ಅಹಂಕಾರ ತುಂಬಿದ ಅಧಿಕಾರಿಯ ಮೇಲೆ ಇಲ್ಲಿಯವರೆಗೂ ಕಾನೂನು ಕ್ರಮ ಜರುಗಿಸದೆ ಒತ್ತಡಕ್ಕೆ ಒಳಗಾಗಿರುವ ಅಧಿಕಾರಿ ವರ್ಗಕ್ಕೆ ಧಿಕ್ಕಾರ ಎಂದು ಪೋಸ್ಟ್ ಮಾಡಿದ್ದಾರೆ.
ಇದೇ ಸಮಯದಲ್ಲಿ ನಾಡು ಮೆಚ್ಚಿದ ದಿವಂಗತ ಮಧುಕರ್ ಶೆಟ್ಟಿ, ಐಪಿಎಸ್ ಅಂತ ದಕ್ಷ ಅಧಿಕಾರಿಗಳಿದ್ದಿದ್ದರೆ ವಿಚಾರ ತಿಳಿದು ಸ್ವಲ್ಪ ಸಮಯದಲ್ಲೇ ಮಾನವೀಯತೆ ಇಲ್ಲದೆ ಹಿಗ್ಗಾಮುಗ್ಗ ಹೊಡೆಯುತ್ತಿರುವ ಈ ನರ ರಾಕ್ಷಸಿರಿಗೆ ಕಾನೂನಿನ ಗತಿ ತೋರಿಸುತ್ತಿದ್ದರು.
ಹೊಸ ಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಇಸ್ಪೀಟ್ ದಂದೆ ಕೋರರನ್ನು ಠಾಣೆಯ ಮುಖ್ಯ ರಸ್ತೆಯಲ್ಲಿ ಓಸಿ ಬರೆಯುವ ದಂದೆ ಕೋರರನ್ನು ಕಳ್ಳ ಕದೀಮರನ್ನು ಈ ರೀತಿ ಹೊಡೆದು ಬಡಿದಿರುವ ವಿಚಾರವೇ ಯಾರಿಗೂ ಗೊತ್ತಿಲ್ಲ. ಏಕೆಂದರೆ ಒಂದನೇ ತಾರೀಖಿನಿಂದ 5ನೇ ತಾರೀಖಿನವರೆಗೂ ಅವರೆಲ್ಲ ಇವರ ಬಂಧುಗಳು.
ಜಣಜಣ ಕಾಂಚಣ. ದಲಿತ ಯುವಕರ ಮೇಲಿನ ದೌರ್ಜನಕ್ಕೆ ನ್ಯಾಯ ಸಿಗುವುದೇ? ಎಂದು ಟ್ಯಾಗ್ ಮಾಡಿದ್ದಾರೆ. ಒಂದನೇ ತಾರೀಖಿನಿಂದ 5 ನೇ ತಾರೀಖಿನವರೆಗೆ ಇವರುಗಳು ಅವರುಗಳ ಬಂಧುಗಳು ಎಂದು ಟ್ಯಾಗ್ಮಾಡಿರುವುದು ಅಚ್ಚರಿಯೂ ಹೌದು, ಕುತೂಹಲವೂ ಹೌದು!