ಫೆ.07 ಮತ್ತು 8 ರಂದು ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ವಿದ್ಯುತ್ ವ್ಯತ್ಯಯ

Power outage program in some parts of Nadidu, Shimoga and Bhadravati tomorrow.

ಸುದ್ದಿಲೈವ್/ಶಿವಮೊಗ್ಗ

ನಾಳೆ ಮತ್ತು ನಾಡಿದ್ದು, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯಲ್ಲಿ ಎನ್.ಟಿ.ರಸ್ತೆ ನ್ಯಾಷನಲ್ ಹೈವೆ ಕಾಮಗಾರಿ ಹಮ್ಮಿಕೊಂಡಿರುವುದ ರಿಂದ ಫೆ. 08 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹರಕೆರೆ, ಹಳೇ ಮಂಡ್ಲಿ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ರಾಮಿನಕೊಪ್ಪ ಅನ್ನಪೂರ್ಣೇಶ್ವರಿ ಬಡಾವಣೆ, ಹೊಸಹಳ್ಳಿ, ಲಕ್ಷ್ಮೀಪುರ, ಹೊಸೂರು, ಐಹೊಳೆ, ಭಾರತಿನಗರ, ಶಾರದನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಭದ್ರಾವತಿಯಲ್ಲಿ ವಿದ್ಯುತ್ ವ್ಯತ್ಯಯ

ಭದ್ರಾವತಿ ಫೆ 07  ಜೆ.ಪಿ.ಎಸ್.ಕಾಲೋನಿಯಲ್ಲಿರುವ 110/33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ" ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಫೆ 08 ರ ಶನಿವಾರ ಬೆಳಗ್ಗೆ 9.30 ರಿಂದ ಸಂಜೆ 6.00 ಘಂಟೆಯವರೆಗೆ ನ್ಯೂಟೌನ್, ಆಂಜನೇಯ ಅಗ್ರಹಾರ, ಕೂಲಿ  ಬ್ಲಾಕ್ ಶೆಡ್. ವಿ.ಐ.ಎಸ್.ಎಲ್. ಅತಿಥಿ ಗೃಹ, ಜಯಶ್ರೀ ವೃತ್ತ,  ಮಿಲ್ಟ್ರಿ ಕ್ಯಾಂಪ್ , ಪೋಲಿಸ್ ಅತಿಥಿ ಗೃಹ, ನ್ಯೂಕಾಲೋನಿ, ಆಕಾಶವಾಣಿ, ಕಾಗದನಗರ, ವಾರ್ಡ್ ಸಂಖ್ಯೆ 6 ಮತ್ತು,8, ಸುರಗಿತೋಪು, ಉಜ್ಜನೀಮರ, ದೊಡ್ಡಗೊಪ್ಪೇನಹಳ್ಳಿ, ಬುಳ್ಳಾಪುರ, ಹೊಡೋ ಹುಡ್ಕೊ ಕಾಲೋನಿ, ಬೊಮ್ಮನಕಟ್ಟೆ, ಹೊಸ ಸಿದ್ದಾಪುರ ಕುಡಿಯುವ ನೀರಿನ ಸ್ಥಾವರ, ಬೊಮ್ಮನಕಟ್ಟೆ  ನಗರಸಭೆ ಕುಡಿಯುವ ನೀರಿನ ಸ್ಥಾವರ, ಬುಳ್ಳಾಪುರ ಕುಡಿಯುವ ನೀರಿನ ಸ್ಥಾವರ, ಹಳೇನಗರ ಕುಡಿಯುವ ನೀರಿನ ಸ್ಥಾವರ, ಎನ್.ಟಿ.ಬಿ. ಬಡಾವಣೆ, ಹಳೇಸಿದ್ದಾಮರ, ಹೊಸೂರು, ತಾಂಡ್ಯ, ಸಂಕ್ಲೀಮರ, ಜನ್ನಾಪುರ, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ಸುಣ್ಣದಹಳ್ಳಿ, ಹಿರಿಯೂರು, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಬಾರಂದೂರು, ಕಾರೇಹಳ್ಳಿ, ಅರಳೀಕೊಪ್ಪ, ಯರೇಹಳ್ಳಿ, ಅಂತರಗಂಗೆ, ಮಾವಿನಕೆರೆ, ದೊಡ್ಡರಿ, ಅರಳಿಕೊಪ್ಪ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವಿಟ್ಟೆ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close