ರಾಜ್ಯದಲ್ಲಿ ಕಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬ್ತಾ ಇದೆ. ಸಿದ್ದರಾಮಯ್ಯ ಸರ್ಕಾರದ ಸಾಧನೆಯನ್ನ ಸಿದ್ದರಾಮಯ್ಯನವರೇ ಹೇಳಬೇಕು ಹಾಗೂ ಅವರ ಸಚಿವ ಸಂಪುಟವೇ ಹೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರ ಭೂಮಿಪೂಜೆ, ಶಂಕುಸ್ಥಾಪನೆಗಳು ಕೇಳ್ತನೇ ಇಲ್ಲ ಕಂಡು ಬರ್ತಿಲ್ಲ. ಆಡಳಿತ ಪಕ್ಷದ ರಾಜೂಕಾಗೆ ಆರ್.ವಿ.ದೇಶಪಾಂಡೆಯವರೆ ಸರ್ಕರ ಅಭಿವೃದ್ಧಿಗೆ ಹಣ ಕೊಡ್ತಾಯಿಲ್ಲ ಎನ್ನುತ್ತಿದ್ದಾರೆ. ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸರ್ಕಾರದ ಶಾಸಕರಿಗೆ ತಲೆ ಎತ್ತಿಕೊಂಡು ಹೋಗುತ್ತಿಲ್ಲದ ಪರಿಸ್ಥಿತಿನಿರ್ಮಾಣವಾಗಿದೆ.
ಸರಣಿ ಆತ್ಮಹತ್ಯೆ
ಸರಣಿ ಆತ್ಮಹತ್ಯೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಚಂದ್ರಶೇಖರ್ ಅವರ ಆತ್ಮಹತ್ಯೆ, ದಾವಣಗೆರೆ ಗುತ್ತಿಗೆದಾರ, ಬೆಳಗಾವಿಯಲ್ಲಿ ರುದ್ರಣ್ಣ ಯಡಗಣ್ಣನವರ ಆತ್ಮಹತ್ಯೆ, ಯಾದಗಿರಿ ಜಿಲ್ಲೆಯಲ್ಲಿ ಪಿಎಸ್ಐ ಪರಶುರಾಮ್ ಶಾಸಕನ ಮಗನ ಕಿರುಕುಲದ ಆರೋಪ ಕೇಳಿ ಬಂದಿತ್ತು. ಗುಲ್ಬರ್ಗದ ಗುತ್ತಿಗೆ ದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ, ರಾಮನಗರದಲ್ಲಿ ಕ್ರಶರ್ ಗುತ್ತಿಗೆದಾರ ಆತ್ಮಹತ್ಯೆ ಆಗಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ಪ್ರಯೋಜಿತ ಔತಣಕೂಟ
ಸಿಎಂ ಸಿದ್ದರಾಮಯ್ಯನವರ ಪ್ರಯೋಜಿತ ಔತಣಕೂ ಸಚಿವ ಸತೀಶ್ ಜಾರಕಿಹೊಳೆಯ ಮನೆಯಲ್ಲಿ ನಡೆದಿದೆ. ಇದು ಕೇವಲ ಔತಣಕೂಟ ಎಂದರೆ ತಪ್ಪಾಗುತ್ತದೆ. ಡಿಸಿಎಂ ಡಿಕೆಶಿ ವಿದೇಶಕ್ಕೆ ಹೋದಾಗ ನಡೆದಾಗ ನಡೆದಿದೆ. ನಾನು ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ ಎಂದಿದ್ದಕ್ಕೆ ವಿಜೇಂದ್ರ ಭವಿಷ್ಯ ನುಡಿತಾರಾ ಆರೋಪ ಮಾಡ್ತಾರೆ ಎಂದಿದ್ದರು.
ಬಿಜೆಪಿ ಹೋರಾಟದ ಪರಿಣಾಮ, ಪರಿಹಾರ ನಿರೀಕ್ಷೆ ಮಾಡದೆ 14 ನಿವೇಶನವನ್ನ ಹಿಂತಿರುಗಿಸಿದ್ದಾರೆ. ನಾನು ಸಿಎಂ ರಾಜೀನಾಮೆ ಬಗ್ಗೆ ಮಾತನಾಡಿರುವುದು ಭವಿಷ್ಯ ನುಡಿದಿದ್ದಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. all is not well in congress party ಎಂಬಂತಾಗಿದೆ. ಬಜೆಟ್ ನಂತರ ಸಿಎದ್ದರಾಮಯ್ಯ ರಾಜೀನಾಮೆ ನೀಡ್ತಾರೆ ಎಂಬ ಚರ್ಚೆ ಕಾಂಗ್ರೆಸ್ ನಲ್ಲಿ ನಡೆದಿದೆ.
ರಾಜಕೀಯ ದಾಳವನ್ನ ಉರುಳಿಸಲು ಔತಣ ಕೂಟದ ಮೂಲಕ ಹೊರಟಿದ್ದಾರೆ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿಲ್ಲ ವಿರೋಧಿ ಬಣ ರಾಜೀನಾಮೆ ನೀಡಲು ಒತ್ತಾಯಿಸುತ್ತಿದೆ. ಇದು ಸಿದ್ದ vs ಯುದ್ದ ಎಂಬಂತಾಗಿದೆ ಎಂದರು.
ಸಾವಿಗೆ ಬಂದಿದ್ದೆ
ಇಂದು ಗುಲ್ಬುರ್ಗದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮನೆ ಮುತ್ತಿಗೆ ನಡೆಯುತ್ತಿದೆ. ನಿನ್ನೆ ಅನಿವಾರ್ಯವಾಗಿ ಶಿಕಾರಿಪುರಕ್ಕೆ ಸಾವಿಗಾಗಿ ಬಂದಿದ್ದೆ. ಪಂಚಾಳ್ ಆತ್ಮಹತ್ಯೆ ಪ್ರಕರಣ ಜಾಂಗ್ರೆಸ್ ಮುಖಙಡ ಹಾಗೂ ಸಚಿವರ ಎಡಗೈ ಬಂಟ ರಾಜೂ ಕಪ್ಪನೂರ್ ಬೆದರಿಕೆಯಿಂದ ಆಗಿರುವುದು ಡೆತ್‌ನೋಟ್ ನಿಂದ ಆಗಿದೆ. ಮೃತ ಪಾಂಚಾಳ್ ಕುಟುಂಬವೇ ಪೊಲೀಸರ ಬಗ್ಗೆ ವಿಶ್ವಾಸವಿಲ್ಲ ಎಂದಿದೆ. ಹಾಗಾಗಿ ಮೃತನ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಬೇಕು ಎಂದರು.
ಖರ್ಗೆ ಪ್ರಕರಣದಲ್ಲಿ ಹೆದರಿಹೋಗಿದ್ದಾರೆ. ಸೊಲ್ಲಾಪುರದ ಕೊಕೆಗಟುಕರನ್ನಬಾಡಿಗೆ ಪಡೆದು ಸಿದ್ದಲಿಂಗ ಸ್ವಾಮೀಜಿಯನ್ನ ಟಾರ್ಗೆಟ್ ಮಾಡಲಾಗಿದೆ ಬಸವರಾಜ್ ಮತ್ತೊಮೋಡ್ ಹತ್ಯೆಗೆ ಸಂಚು, ಸಂಜು ಪಾಂಡೆ ಹತ್ಯೆಗೆ ಟಾರ್ಗೆಟ್ ಮಾಡಲಾಗಿದೆ. ಗುಲ್ಬರ್ಗದಲ್ಲಿ ವಿಪಕ್ಷಗಳು ಬೆಳೆಯುತ್ತಿದೆ ಎಂಬ ಹೆದರಿಕೆಗೆ ಸಂಚು ರೂಪಿಸಲಾಗಿದೆ. ಹಾಗಾಗಿ ಇದು ಸಿಬಿಐಗೆ ವಹಿಸಬೇಕು.
ಪ್ರಿಯಾಂಕ್ ಖರ್ಗೆಗೆ ಸಲಹೆ
ಖರ್ಗೆಗೆ ಸಲಹೆ ನೀಡಿದ ವಿಜೇಂದ್ರ ಪ್ರಕರಣವನ್ನ ಸಿಬಿಐಗೆ ವಹಿಸಿದರೆ ಸುರಕ್ಷಿತರಾಗುತ್ತೀರಿ. ಗಣಪತಿ ಹತ್ಯೆ ಪ್ರಕರಣ ಸಿಬಿಐನಿಂದಲೇ ನಿಮಗೆ ಕ್ಲೀನ್ ಚೀಟ್ ನೀಡಲಾಗಿದೆ. ಸಿಒಡಿಯಿಂದ ಖರ್ಗೆಗೆ ನ್ಯಾಯ ಸಿಗೊಲ್ಲ. ಅವರ ಪಕ್ಷದಲ್ಲೇ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಗೌರವಯುತವಾಗಿ ಮೃತರ ಕುಟುಂಬಕ್ಕೆ ನ್ಯಾಯಕೊಡಿಸಲು ಪಾಂಚಾಳ್ ಆತ್ಮಹತ್ಯೆಯನ್ನ ಸಿಬಿಐಗೆ ವಹಿಸಬೇಕು ಎಂದರು.
6 ತಿಂಗಳಲ್ಲಿ 734 ಬಾಂತಿಯರ ಸಾವು
ಬಾಣಂತಿಯರ ಮತ್ತು ನವಜಾತ ಶಿಶುಗಳ ಸಾವು 6 ತಿಂಗಳಲ್ಲಿ 734 ಸಾವಾಗಿದೆ 1000 ಕ್ಕೂ ಹೆಚ್ಚು ನವಜಾತ ಶಿಶು ಹತ್ಯೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಎದ್ದುಕಾಣುತ್ತಿದೆ. ಆರೋಗ್ಯ ಸಚಿವರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಮತ್ತು ಮೆಡಿಕಲ್ ಮಾಫಿಯಾ ಕಾರಣ ಎಂದು ದೂರಿದರು.
ಬ್ಲಾಕ್ ಲೀಸ್ಟ್ ನಲ್ಲಿರುವ ಕಂಪನಿಗಳು ಔಷಧಿಗಳನ್ನ ಸರಬರಾಜು ಮಾಡುತ್ತಿವೆ. ಪ್ರಕರಣವನ್ನ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು. ಮಾತೃಯೋಜನೆ, ಇಂಧ್ರ ಧನುಶ್ ಯೋಜನೆ ತಾಯಿಂದಿರಕ್ಕೆ ತಲುಪ್ತ ಇಲ್ಲ. ಕುಟುಂಬಕ್ಕೆ 25 ಲಕ್ಷ ಬಾಣಂತಿಯರಿಗೆ ನೀಡಬೇಕು. ಮತ್ತು ನವಜಾತ ಶಿಶು ಸಾವಿಗೂ ನೀಡಬೇಕು ಎಂದರು.
ಗ್ಯಾರೆಂಟಿಗಾಗಿ ಬಸ್ ದರ ಏರಿಕೆ
KSRTC ಬಸ್ ಪ್ರಯಾಣ ದರವನ್ನ 15% ಏರಿಕೆಯಾಗಿದೆ. ಶಕ್ತಿಯೋಜನೆಗೆ ಹಣ ಹೊಂದಿಸಲು ಸಾಧ್ಯವಾಗ್ತಾ ಇಲ್ಲ. ಪರಿಣಾಮ ಸಾರಿಗೆ ಸಂಸ್ಥೆಗಳು ಸಾವಿರಾರು ಕೋಟಿ ರೂ. ನಷ್ಟವನ್ನ ಎದಯರಿಸಲಾಗುತ್ತಿದ್ದು ಸಾರಿಗೆ ಸಙಸ್ಥೆಗಳು ಮುಚ್ಚಿಹಾಕುವ ಸಂಧರ್ಭ ಎದುರಾಗಿದ್ದು, ದರ ಏರಿಸಿ ನಿರ್ವಹಣೆ ಮಾಡಲಸಗುತ್ತಿದೆ. ಮಹಿಳೆಯರಿಗೆ ಉಚಿತ, ಪುರುಷರಿಗೆ ಪರದಾಟ ಖಚಿತ ವೆಂಬಂತಾಗಿದೆ. ಹಾಗಾಗಿ ಸಿಎಂ ಶ್ವೇತ ಪತ್ರ ಹೊರಡಿಸಬೇಕು ಎಂದು ದೂರಿದರು.
ಎಲ್ಲಾ ಸರ್ಕಾರಗಳು ದರ ಹೆಚ್ಚಿಸಿವೆ. ದರ ಏರಿಸಿದಾಗ ಪರಿಸ್ಥಿತಿಗಳನ್ನ ಅವಲೋಕನ ಮಾಡಲಾಗುತ್ತದೆ. ಗ್ಯಾರೆಂಟಿಯನ್ನ ನಿಬಾಯಿಸಲು ರಾಜ್ಯ ಸರ್ಕಾರ ದರ ಏರಿಸಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ತುದಿಗಾಲಿನಲ್ಲಿ ನಿಲ್ಸಿದ್ದೇನೆ.
ರಾಜ್ಯಾಧ್ಯಕ್ಷನಾಗಿ ಒಂದು ವರ್ಷ ಕಳೆದಿದೆ. ವಿಜೇಂದ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಒಂದು ವರ್ಷದಲ್ಲಿ ರಾಜ್ಯ ಸರ್ಕಾರವನ್ನ ಭ್ರಷ್ಠಾಚಾರದ ವಿಚಾರದಲ್ಲಿ ತುದಿಗಾಲಿನಲ್ಲಿ ನಿಲ್ಸಿದ್ದೇನೆ. ಹಿರಿಯರ ಮನವೊಲಿಕೆ ಆಗವೇಕಿತ್ತು. ಇಬ್ವರ ಮಾತುಗಳನ್ನ ಬದಿಗಿಟ್ಟು ಬಿಜೆಪಿಯನ್ನ ಸ್ಪಷ್ಟವಾಗಿ ಬಹುಮತಕ್ಕೆ ತರಲಿದ್ದೇನೆ ಎಂದರು.
ನಾನು ಚಾಡಿಹೇಳಲು ಹೈಕಮಾಂಡ್ ಬಳಿಹೊಗಿರಲಿಲ್ಲ. ಹೋರಾಟ ಮತ್ತು ಬಿಜೆಪಿ ಬಲವನ್ನ ತಿಳಿಸಿದ್ದೇನೆ. ಯತ್ನಾಳ್ ಅವರ ವಕ್ಫ್ ಹೋರಾಟ ಮುಂದುವರೆಯಲಿದೆ ಎಂದರು.