A quarrel over the installation of an electric transformer in the farm ended in a murder. |
ಸುದ್ದಿಲೈವ್/ಭದ್ರಾವತಿ
ಜಮೀನಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೂರಿಸುವ ವಿಷಯದಲ್ಲಿ ಜಗಳವಾಗಿದ್ದು ಓರ್ವನ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ತಾಪ್ತಿಯ ದೊಡ್ಡೇರಿ ಗ್ರಾಮದಲ್ಲಿ ಜಮೀನಿನಲ್ಲಿ ವಿದ್ಯುತ್ ಟ್ರ್ಯಾನ್ಸಫಾರ್ಮರ್ ಅಳವಡಿಸುವ ವಿಚಾರವಾಗಿ ಜಗಳವಾಗಿದೆ.
ಈ ವಿಚಾರವಾಗಿ ಲೇಪಾಕ್ಷಿ ಎಂಬ 40 ವರ್ಷದ ವ್ಯಕ್ತಿ 35 ವರ್ಷದ ಶಾಂತ ಕುಮಾರ್ ಎಂಬ ವ್ಯಕ್ತಿಯನ್ನ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಲೇಪಾಕ್ಷಿ ಮತ್ತೋರ್ವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ. ಇವಿಷ್ಟು ಪ್ರಾಥಮಿಕ ಮಾಹಿತಿಯಾಗಿವೆ.