ಡಾ.ಸರ್ಜಿ ಹೆಸರಿನಲ್ಲಿ ವಿಷಯುಕ್ತ ಸಿಹಿ ಹಂಚಿಕೆ-ಬಿಜೆಪಿ ನಿಯೋಗ ಎಸ್ಪಿಗೆ ಮನವಿ


ಸುದ್ದಿಲೈವ್ /ಶಿವಮೊಗ್ಗ

ಭದ್ರಾವತಿಯ ವ್ಯಕ್ತಿಯೋರ್ವ ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಮೂವರಿಗೆ ಸ್ವೀಟ್ ಕಳುಹಿಸಿರುವ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಿಯೋಗ ಎಸ್ಪಿ ಕಚೇರಿಗೆ ಭೇಟಿನೀಡಿ ಎಸ್ಪಿ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. 

ಮೊದಲಿಗೆ ಮಾತನಾಡಿದ ಶಾಸಕ ಚೆನ್ನಬಸಪ್ಪ, ಬಿಜೆಪಿ ನಿಯೋಗವು ಎಂಎಲ್ ಸಿ ಡಾ.ಧನಂಜಯ ಸರ್ಜಿ ಬಂಧಿಸುವಂತೆ ಎಸ್ಪಿಗೆ ಮನವಿ ನೀಡಲಾಗಿದೆ. ಆತನ ವಿರುದ್ಧ ಕ್ರಮ ಸಹ ಆಗಬೇಕು ಎಂದು ಮನವಿ ಸಲ್ಲುಸಲಾಗಿದೆ. ವಿಚಿತ್ರವಾದ ಪರಿಸ್ಥಿತಿ ಇದು. ಸಂಕ್ರಾಂತಿಗೆ ಏನಾಗುತ್ತದೆ ಎಂಬ ಭಯವಿದೆ. ಕಳೆದ ವರ್ಷ ಡಾ.ಧನಂಜಯ ಸರ್ಜಿ 50 ಸಾವಿರ ಎಳ್ಳು ಪ್ಯಾಕೆಟ್ ಕಳುಗಿಸಿದ್ದರು. ಈ ವರ್ಷ ಕಳೆದ ಬಾರಿ ಕಳುಹಿಸಿದ ಹಾಗೆ ಈ ಬಾರಿ ಕಳುಹಿಸಿದರೆ ಏನಾಗಲಿದೆ ಎಂಬ ಭಯ ಹೆಚ್ಚಾಗಿದೆ ದುಷ್ಕರ್ಮಿಯ ವಿರುದ್ಧ ಪೊಲೀಸರಿಗೆ ಕ್ಲೂ ಸಿಕ್ಕಿದೆ ಎಂದರು. 

ಎಂಎಲ್ ಸಿ ಡಾ.ಧನಂಜಯ ಸರ್ಜಿ

ಡಾ.ಸರ್ಜಿ ಮಾತನಾಡಿ, ಶಾಕರು ಮತ್ತು ಬಿಜೆಪಿ ನಾಯಕರ ಜೊತೆ ಎಸ್ಪಿ ಕಚೇರಿಗೆ ಬಂದು ದುಷ್ಕರ್ಮಿಗಳನ್ನ ಬಂಧಿಸುವಂತೆ  ಮನವಿ ಮಾಡಲಾಗಿದೆ ಎಸ್ಪಿ ಅವರು ಸಹ ಒಂದು ದಿನಗಳಲ್ಲಿ ಈ ಕೃತ್ಯ ಮಾಡಿರುವುದನ್ನ ಬಹಿರಂಗ ಪಡಿಸುವುದಾಗಿ ಎಸ್ಪಿ ಭರವಸೆ ನೀಡಿದ್ದಾರೆ ಎಂದರು. 

ಇದು ಕ್ರಿಮಿನಲ್ ಚಟುವಟಿಕೆಯಾಗಿದೆ. ಹಸುಗೂಸಿಗೆ ಯಾರಾದರೂ ತಿನ್ನಿಸಿದ್ದರೆ ಎಂಬುದು ಹೆದರಿಕೆ ಆಗ್ತಾ ಇತ್ತು. ಒಳ್ಳೊಳ್ಳೆ ಕೆಲಸಗಳು ನಮ್ಮಿಂದ ಆಗ್ತಾ ಇದೆ. ಇದರ ಬಗ್ಗೆ ಗಮನಹರಿಸುತಾಗಿದೆ. ಕೋಟೆ ಪಿಐ ಹರೀಶ್ ಪಾಟೇಲ್ ನೇತೃತ್ವದಲ್ಲಿ ತಂಡ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು. 

ನಮಗೆ ಯಾರ ಬಗ್ಗೆನೂ ಅನುಮಾನವಿಲ್ಲ. ಆತನ ಕೆಲಸ ವಿನಾಶಕಾರಿ ವ್ಯಕ್ತಿತ್ವವಾಗಿದೆ. ಇಬ್ಬರು ವೈದ್ಯರು ಮತ್ತು ಓರ್ವ ಎನ್ ಇಎಸ್ ಕಾರ್ಯದರ್ಶಿ ಗೆ ನನ್ನ ಹೆಸರಿನಲ್ಲಿ ಸಿಹಿ ಕಳುಹಿಸಿದ್ದಾನೆ. ಇವರನ್ನೇ ಯಾಕೆ ಟಾರ್ಗೆಟ್ ಮಾಡಿ ಸಿಹಿ ಕಳುಹಿಸಲಾಗಿದೆ  ಎಂಬುದು ಪೊಲೀಸರು ತನಿಖೆಯಿಂದ ತಿಳಿದು ಬರಬೇಕಿದೆ ಎಂದರು. 

ಈ ಬಗ್ಗೆ ಎಸ್ಪಿಯವರು ಸಹ ಮಾಧ್ಯಮಗಳ ಜೊತೆ ಮಾತನಾಡಿ, ಕ್ಲೂ ಸಿಕ್ಕಿದೆ ಆರೋಪಿಯನ್ನ ಪತ್ತೆ ಮಾಡುವುದಾಗಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close