ಸುದ್ದಿಲೈವ್/ಶಿವಮೊಗ್ಗ
ಮಹಾನಗರ ಪಾಲಿಕೆ ಪೌರಕಾರ್ಮಿಕನಿಗೆ ಕಿರುಕುಳ ನೀಡಿರುವ ಮಾಜಿ ಕಾರ್ಪರೇಟರ್ ಪ್ರಭಾಕರ ಯಾನೆ ಪ್ರಭುರವರ ವಿರುದ್ಧ ಕಾನೂನು ಕ್ರಮ ಜೈಗೊಳ್ಳುವಙತೆ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಪಾಲಿಕೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಪಾಲಿಕೆಯ ಅಂಬೇಡ್ಕರ್ ಪ್ರತಿಮೆ ಕೆಳಗೆ ಟೆಙಟ್ ಹಾಕಿ ಪ್ರತಿಭಟನೆ ನಡೆಸಲಾಗಿದೆ. ಮೇಸ್ತ್ರಿ ಮೂರ್ತಿಗೆ ಕಾರ್ಪರೇಟರ್ ಪ್ರಭಾಕರ್ ಸಾಕಷ್ಟು ಬಾರಿ ಮಾನಸಿಕ ಕಿರುಕುಳ ನೀಡಿದ್ದಾರೆ. ನಿನ್ನೆ ಪೌರಕಾರ್ಮಿಕ ಮೂರ್ತಿ ಆತ್ಮಹತ್ಯೆಯ ಕುರಿತು ವಿಡಿಯೋ ಹಾಕಿದ್ದರು.
ಅವರನ್ನ ಸುರಕ್ಷಿತವಾಗಿ ಕರೆದುಕೊಂಡು ಬಂದು ಮೆಗ್ಗಾನ್ ಗೆ ದಾಖಲಿಸಲಾಗಿದೆ. ಮಾಜಿ ಕಾರ್ಪರೇಟರ್ ಪ್ರಭುವಿಗೆ ಸಂಬಂಧವಿಲ್ಲದಿದ್ದರೂ ಪಾಲಿಕೆಯ ವಿವಿಧ ಶಾಖೆಗಳ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಹಿಂದಯೂ ಪ್ರಭುವರ ಹಸ್ತಕ್ಷೇಪದಿಂದ ಪೌರಕಾರ್ಮಿಕನ ಕರ್ತವ್ಯಕ್ಕೆ ಅಡ್ಡಿಯುಂಟಾಗಿತ್ತು.
ಪೌರಕಾರ್ಮಿಕನ ಆತ್ಮಹತ್ಯೆಗೆ ಕಾರಣನಾದ ಮಾಜಿ ಕಾರ್ಪರೇಟರ್ ಪ್ರಭುರವರ ವಿರುದ್ಧ ದೂರು ದಾಖಲಿಸಬೇಕು ಹಾಗೂ ಬಂಧಿಸಬೇಕು ಎಂದು ಎಸ್ಪಿ ಮಿಥುನ್ ಕುಮಾರ್ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪಾಲಿಕೆ ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್, ವಿಶ್ವನಾಥ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವು ಕುಮಾರ್, ಪೌರಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ, ಅಪ್ಪು ಅಭಿಮಾನಿ ಬಳಗದ ಮಧು, ಡಿಎಸ್ಎಸ್ ನ ಹರಮಘಟ್ಟ ರಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.