ಸುದ್ದಿಲೈವ್/ಶಿವಮೊಗ್ಗ
ಅನಾರೋಗ್ಯದಿಂದ ಮೃತಪಟ್ಟಿದ್ದ ‘ಪಬ್ಲಿಕ್ ಟಿವಿ’ ಶಿವಮೊಗ್ಗ ಜಿಲ್ಲಾ ವರದಿಗಾರ ಕೆ.ವಿ ಶಶಿಧರ್ ಹಾಗೂ ಹೃದಯಾಘಾತಕ್ಕೆ ಒಳಗಾದ ಶಿವಮೊಗ್ಗ ನಂದನ್ ಅವರ ಅಂತ್ಯಕ್ರಿಯೆ ನಡೆದಿದೆ. ಶಶಿಧರ್ ಅವರ ಹುಟ್ಟೂರು ಹಾಸನದ ಅರಸೀಕೆರೆಯ ಎಸ್.ಕಲ್ಲಹಳ್ಳಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ನೆರವೇರಿದರೆ, ಶಿವಮೊಗ್ಗ ನಂದನ್ ಅವರ ಅಂತ್ಯಕ್ರಿಯೆ ರೋಟರಿ ಚಿತಾಗಾರದಲ್ಲಿ ನಡೆದಿದೆ. ಕೆ.ವಿ.ಶಶಿಧರ್ ಅವರ ಅಂತ್ಯಕ್ರಿಯೆ
ಶಶಿ ಅವರ ಅಂತ್ಯಸಂಸ್ಕಾರದಲ್ಲಿ ʻಪಬ್ಲಿಕ್ ಟಿವಿʼ ಸಂಪಾದಕ ದಿವಾಕರ್, ಜಿಲ್ಲಾ ಸುದ್ದಿ ಸಂಯೋಜಕ ಮನೋಹರ್, ಹೆಚ್‌ಆರ್ ವಿಭಾಗದ ಶಂಕರ್ ಹಾಗೂ ಪೊಲಿಟಿಕಲ್ ಬ್ಯೂರೋ ಚೀಫ್ ರವೀಶ್ ಪಾಲ್ಗೊಂಡಿದ್ದರು. ಈ ವೇಳೆ ಶಶಿಧರ್ ಅವರ ತಂದೆಗೆ ದಿವಾಕರ್ ಅವರು ಸಾಂತ್ವನ ಹೇಳಿದ್ದಾರೆ.ನಂದನ್ ಅವರ ಪಾರ್ಥೀವ ಶರೀರ
ಮೃತರು ಪತ್ನಿ, ತಂದೆ-ತಾಯಿಯನ್ನು ಅಗಲಿದ್ದಾರೆ. ಶಶಿಧರ್ ಕಳೆದ 16 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಸಚಿವ ಮಧು ಬಂಗಾರಪ್ಪ, ಶಿವಮೊಗ್ಗದ ಶಾಸಕ ಚೆನ್ನಬಸಪ್ಪ, ಸಂಸದ ಬಿ.ವೈರಾಘವೇಂದ್ರ, ಮಾಜಿ ಸಚಿವ ಕುಮಾರ ಬಂಗಾರಪ್ಪ, ರಾಷ್ಟ್ರಭಕ್ತರ ಬಳಗದ ಕಾಂತೇಶ್, ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಕುಮಾರ್ ಮೊದಲಾದವರು ಶಶಿಧರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಅದರಂತೆ ನಂದನ್ ಅವರ ನಿಧನಕ್ಕೂ ಸಚಿವ ಮಧು ಬಂಗಾರಪ್ಪ, ಶಾಸಕ ಚೆನ್ನಬಸಪ್ಪ, ಸಂಸದ ರಾಘವೇಂದ್ರ, ಮೊದಲಾದವರು ಕಂಬನಿ ಮಿಡಿದಿದ್ದಾರೆ. ಜಿಲ್ಲಾ ಬಿಜೆಪಿ ಪಕ್ಷವೂ ಇಬ್ವರು ಗಣ್ಯ ಪತ್ರಕರ್ತರ ನಿಧನಕ್ಕೆ ಸಂತಾಪ ಸೂಚಿಸಿದೆ.