Former Home Minister AragaJyanendra has responded to the media on the issue of internal differences in the BJP and said that there are some differences among the leaders of the BJP. |
ಸುದ್ದಿಲೈವ್/ಶಿವಮೊಗ್ಗ
ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ವಿಚಾರದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬಿಜೆಪಿಯ ಕೆಲವೊಂದು ವ್ಯತ್ಯಾಸಗಳು ಮುಖಂಡರಲ್ಲಿ ಇವೆ ಎಂದಿದ್ದಾರೆ.
ಅದನ್ನ ನಾನು ಒಪ್ಪಿಕೊಳ್ಳುತ್ತೇನೆ. ಅದನ್ನು ಸರಿ ಮಾಡುವ ಶಕ್ತಿ ಬಿಜೆಪಿಯ ಹೈ ಕಮಾಂಡ್ ಗೆ ಇದೆ. ಹೈ ಕಮಾಂಡ್ ತುಂಬಾ ಪವರ್ ಫುಲ್ ಆಗಿದೆ. ನಿನ್ನೆ ಬೆಂಗಳೂರಿನಲ್ಲಿ ಪಕ್ಷದ ಸಭೆ ನಡೆದಿದೆ. ಕೇಡರ್ ಆಧಾರಿತ ಪಕ್ಷವಾದ ಬಿಜೆಪಿಯಲ್ಲಿ ಕಾರ್ಯಕರ್ತರು ತುಂಬಾ ಸ್ಟ್ರಾಂಗ್ ಇದ್ದಾರೆ. ಕಾರ್ಯಕರ್ತರೇ ನಮ್ಮ ಹೈ ಕಮಾಂಡ್ ಎಂದು ಪ್ರತಿಕ್ರಿಯಿಸಿದರು.
ಕೆಲವೊಂದು ಸಣ್ಣಪುಟ್ಟ ತಪ್ಪು ತಿಳಿವಳಿಕೆಗಳಿಂದ ಈ ರೀತಿ ಆಗುತ್ತಿದೆ. ಶ್ರೀರಾಮುಲು ಕೂಡ ನಮ್ಮ ಒಳ್ಳೆ ಕಾರ್ಯಕರ್ತರು ಹಾಗೂ ನಾಯಕರು ಕೂಡ ಹೌದು! ಹಾಗೆ ಜನಾರ್ದನ ರೆಡ್ಡಿ ಅವರು ಕೂಡ ನಮ್ಮ ನಾಯಕರೇ, ಅವರಿಬ್ಬರ ನಡುವಿನ ಭಿನ್ನಮತ ಸರಿ ಹೋಗುತ್ತದೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದಿದ್ದಾರೆ.
ನಮ್ಮ ಪಕ್ಷದಲ್ಲಿ ಈಗ ಆಂತರಿಕ ಚುನಾವಣೆ ನಡೆಯುತ್ತಿದೆ. ನಮ್ಮಲ್ಲಿದ್ದ ಹಾಗೆ ಬೇರೆ ಯಾವ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಜಿಲ್ಲಾ ಮಟ್ಟದ ಅಧ್ಯಕ್ಷರ ಚುನಾವಣೆ ನಂತರ ರಾಜ್ಯ ಅಧ್ಯಕ್ಷರ ಚುನಾವಣೆ ನಡೆಯಲಿದೆ ಅಲ್ಲಿ ಅಧ್ಯಕ್ಷರ ಆಯ್ಕೆ ಆಗಲಿದೆ. ಹಾಗಾಗಿ ಯಾರೋ ಹೇಳಿದ ಕೂಡಲೇ ರಾಜ್ಯಾಧ್ಯಕ್ಷರ ಬದಲಾವಣೆ ಆಗುವುದಿಲ್ಲ ಎಂದರು.
ನಮ್ಮ ಪಕ್ಷದಲ್ಲಿ ಅಧಿಕಾರ ಎಂಬುದು ಒಂದು ಹುದ್ದೆಯಲ್ಲ ಅದೊಂದು ಜವಾಬ್ದಾರಿ. ಹಾಗಾಗಿ ಪಕ್ಷಕ್ಕೆ ಹೆಚ್ಚು ಸಮಯ ಕೊಡುವವರಿಗೆ ಜವಾಬ್ದಾರಿ ನೀಡಲಾಗುತ್ತದೆ ಎಂದು ಅವರಯ ತಿಳಿಸಿದರು.