ನೀರಸ ಮತದಾನ

The polling for Shimoga Housing Cooperative Society, which has become a battleground of prestige, has ended and the voter turnout is around 68%.


ಸುದ್ದಿಲೈವ್/ಶಿವಮೊಗ್ಗ

ಪ್ರತಿಷ್ಠೆತೆಯ ಕಣವಾಗಿ ಮಾರ್ಪಾಟಾಗಿರುವ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು ಸರಿ ಸುಮಾರು 68% ಮತದಾನವಾಗಿದೆ. 

ಬೆಳಿಗ್ಗೆ 9 ರಿಂದ  4 ಗಂಟೆಯ ವರೆಗೆ ನಡೆದ ಕೋಆಪರೇಟಿವ್ ಸೊಸೈಟಿಯ ಚುನಾವಣೆಯಲ್ಲಿ 33 ಜನ ಕಣದಲ್ಲಿದ್ದು 17 ಜನ ಆಯ್ಕೆಯಾಗಲಿದ್ದಾರೆ. ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಚುನಾವಣೆಯಲ್ಲಿ ಎಸ್ ಕೆ ಮರಿಯಪ್ಪ, ಎಸ್ಪಿ ದಿನೇಶ್, ಉಮಾಶಂಕರ್ ಉಪಾಧ್ಯ, ಎಂ ಆರ್ ಪ್ರಕಾಶ್ ಮೊದಲಾದವರು ಹಳಬರು ಕಣದಲ್ಲಿದ್ದು ಹೊಸಬರು ಕಣದಲ್ಲಿದ್ದಾರೆ. 

ಈ ಹಿಂದೆ ಇದ್ದ ಕೆಲ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದಲ್ಲಿರುವ ನಿರ್ದೇಶಕರು ಈ ಬಾರಿ ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸತ್ತರವರು, ಊರು ಬಿಟ್ಟವರು, ವಿದೇಶದಲ್ಲಿ ನೆಲೆಸಿದವರು, ಸಾಮಾನ್ಯ ಸಭೆಯಲ್ಲಿ‌ಭಾಗವಹಿಸದವರು ಮತದಾರ ಪಟ್ಟಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಚುನಾವಣೆ ಮುಂದೆ ಹಾಕುವಂತೆ ಸುದ್ದಿಗೋಷ್ಠಿ ನಡೆಸಿದ್ದರು. 

ಆದರೆ ಚುನಾವಣೆ ಮುಂದೂಡದೆ ನಿಗದಿತ ದಿನಾಂಕಕ್ಕೆ ಮತದಾನ ನಡೆದಿದೆ. ಮತ ಎಣಿಕೆ ಆರಂಭವಾಗಿದ್ದು 9-10 ಗಂಟೆಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. 3036 ಮತಗಳಲ್ಲಿ 2063 ಮತದಾನವಾಗಿದೆ. ಬಾಲರಾಜ್ ಅರಸ್ ರಸ್ತೆಯಲ್ಲುರುವ ನ್ಯಾಷನಲ್ ಬಾಯ್ಸ್ ಹೈಸ್ಕೂಲ್ ನಲ್ಲಿ ಮತದಾನ ನಡೆದಿದ್ದು ಮತ ಎಣಿಕೆ ಸಹ ಅಲ್ಲೇ ನಡೆಯಲಿದೆ.ನ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close