The election of the prestigious graduate cooperative society is the election of 12 directors. Out of the 26 candidates in the arena, 12 directors have been selected. |
ಸುದ್ದಿಲೈವ್/ಶಿವಮೊಗ್ಗ
ಪ್ರತಿಷ್ಠಿತ ಪದವೀಧರ ಸಹಕಾರ ಸಂಘದ ಚುನಾವಣೆಯ 13 ಜನ ನಿರ್ದೇಶಕರ ಆಯ್ಕೆಯಾಗಿದೆ. 26 ಜನ ಅಖಾಡದಲ್ಲಿದ್ದ ಅಭ್ಯರ್ಥಿಗಳಲ್ಲಿ 13 ಜನ ನಿರ್ದೇಶಕರ ಆಯ್ಕೆಯಾಗಿದೆ.
2902 ಮತಗಳು ಚಲಾವಣೆ ಆಗಬೇಕಿದ್ದ ಜಾಗದಲ್ಲಿ 2092 ಮತಗಳು ಚಲಾವಣೆಗೊಂಡು ಸರಾಸರಿ ಶೇ.72 ರಷ್ಟು ಮತಚಲಾವಣೆಯಾಗಿತ್ತು. ಈಗ ಮತದಾನ ಪೂರ್ಣಗೊಂಡಿದ್ದು ಎಸ್ಪಿ ದಿನೇಶ್ ಅವರ ತಂಡ ಮತ್ತೊಮ್ಮೆ ಜಯಭೇರಿ ಭಾರಿಸಿದೆ.
ಈಗಾಗಲೇ ಬಿಸಿಎಂ ಎ ಕ್ಷೇತ್ರದಿಂದ ಗೋಪಾಲಕೃಷ್ಣ ಟಿ ಅವಿರೋಧ ಆಯ್ಕೆಯಾಗಿದ್ದು, ಸಾಮಾನ್ಯ ವರ್ಗದಿಂದ ಎಸ್ಪಿ ದಿನೇಶ್ ಅತಿಹೆಚ್ಚು ಮತಗಳನ್ನ ಪಡೆದು ಗೆದ್ದು ಬೀಗಿದ್ದಾರೆ. 1483 ಮತಗಳನ್ನ ಪಡೆದಿದ್ದಾರೆ. ಡಾ.ಎಸ್ ಹೆಚ್ ಪ್ರಸನ್ನ 1204 ಮತಗಳು,
ಕೃಷ್ಣಮೂರ್ತಿ ಎಸ್ ಕೆ 1201 ಮತಗಳು, 1075 ಮತಗಳನ್ನ ರುದ್ರೇಶ್ ಪಿ ಪಡೆದಿದ್ದಾರೆ. 1029 ಡಾ.ಚಂದ್ರಶೇಖರಪ್ಪ ಯು. 952 ಮತಗಳನ್ನ ಪಡೆದ ಜೋಗಪ್ಪ ವೀರಪ್ಪ, ನಾಗರ್ಷ ಕೆ.ಎಂ. 896 ಮತಗಳು, ಮಹಿಳಾ ಮೀಸಲಿನಿಂದ ಮಮತಾ ಎಸ್ 1069, ಭುವನೇಶ್ವರಿ ಡಿಎಸ್ 872 ಮತಗಳು,
ಹಿಂದುಳಿದ ವರ್ಗಗಳ ಪ್ರವರ್ಗ ಬಿ ಯಿಂದ ಶಿವಾನಂದ ಯು 803, ಪರಿಶಿಷ್ಟ ಜಾತಿ ಮೀಸಲಿನಿಂದ ಜಗದೀಶ್ ಟಿ 811 ಮತಗಳು, ಪರಿಶಿಷ್ಟ ಪಂಗಡದಿಂದ ರಮ್ಯ ಯು1004 ಮತಗಳನ್ನ ಪಡೆದಿದ್ದಾರೆ. ಇದಲ್ಲಿ ಎಸ್ಪಿ ದಿನೇಶ್ ಅವರ ತಂಡವೇ ಬಹುತೇಕ ಗೆದ್ದಿದೆ.